Advertisement

ಪಶ್ಚಿಮ ಬಂಗಾಳ : ಶಾಲೆಯ ಮೇಲ್ಛಾವಣಿಯಲ್ಲೇ ಬಾಂಬ್ ಸ್ಫೋಟ

04:42 PM Sep 17, 2022 | Team Udayavani |

ಕೋಲ್ಕತ : ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ತೀತಾಗಢ ಪ್ರದೇಶದಲ್ಲಿರುವ ಪ್ರೌಢ ಶಾಲೆಯ ಮೇಲ್ಛಾವಣಿಯಲ್ಲೇ ಬಾಂಬ್ ಸ್ಫೋಟ ಸಂಭವಿಸಿರುವ ಘಟನೆ ಶನಿವಾರ 12 ಗಂಟೆಯ ವೇಳೆಗೆ ನಡೆದಿದೆ.

Advertisement

ಶಾಲೆಯಲ್ಲಿ ಪಾಠ ನಡೆಯುತ್ತಿರುವಾಗಲೇ ಬಾಂಬ್ ಸ್ಫೋಟಗೊಂಡಿದ್ದು,ಅದೃಷ್ಟವಷಾತ್ ಯಾರಿಗೂ ಗಾಯವಾಗಿಲ್ಲ.

ಇದನ್ನೂ ಓದಿ: ನನ್ನ ಹತ್ಯೆಗೆ ಪ್ರಯತ್ನ ನಡೆದಿತ್ತು: ಕೇರಳ ರಾಜ್ಯಪಾಲ ಆರಿಫ್ ಖಾನ್ ಆಕ್ರೋಶ

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ.
ಘಟನೆಯ ಬಳಿಕ ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಅಗತ್ಯವಿದ್ದರೆ ವಿಧಿವಿಜ್ಞಾನ ತಂಡಗಳನ್ನು ಕರೆಯುತ್ತೇವೆ ಎಂದು ಬ್ಯಾರಕ್‌ಪುರ ಕೇಂದ್ರ ವಲಯ ಡಿಸಿ ಆಶಿಶ್ ಮೌರ್ಯ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next