Advertisement

ಸೌದಿ ಅರೇಬಿಯಾದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊಗೆ ಸಂಕಷ್ಟ ತಂದ ಗೆಳತಿ ಜಾರ್ಜಿನಾ ಫೋಟೋ

05:07 PM May 12, 2023 | Team Udayavani |

ರಿಯಾಧ್: ಫುಟ್‌ ಬಾಲ್ ಸೂಪರ್‌ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಇತ್ತೀಚೆಗೆ ಸೌದಿ ಅರೇಬಿಯಾಕ್ಕೆ ತೆರಳಿ ಸೌದಿ ಪ್ರೊಫೆಷನಲ್ ಲೀಗ್ ಕ್ಲಬ್ ಅಲ್ ನಾಸ್ರ್‌ ಪರವಾಗಿ ಆಡುತ್ತಿದ್ದಾರೆ.  ವಿಶ್ವ ಶ್ರೇಷ್ಠ ಫುಟ್ಬಾಲರ್ ರೊನಾಲ್ಡೊ ತನ್ನ ಗೆಳತಿ ಜಾರ್ಜಿನಾ ರೊಡ್ರಿಗಸ್ ಮತ್ತು ಐವರು ಮಕ್ಕಳೊಂದಿಗೆ ಯುರೋಪ್‌ ನಿಂದ ಮಧ್ಯಪ್ರಾಚ್ಯ ರಾಷ್ಟ್ರಕ್ಕೆ ತನ್ನ ತೆರಳಿ ನೆಲೆಸಿದ್ದಾರೆ.

Advertisement

ಮದುವೆಯಾಗದ ದಂಪತಿಗಳು ಸಹಬಾಳ್ವೆ ಮಾಡುವುದನ್ನು ನಿಷೇಧಿಸುವ ಸೌದಿಯ ನಿಯಮಗಳ ಹೊರತಾಗಿಯೂ ದಂಪತಿಗಳು ಒಟ್ಟಿಗೆ ವಾಸಿಸಲು ವಿಶೇಷ ಅನುಮತಿಯನ್ನು ನೀಡಲಾಯಿತು. ಆದರೆ ಜಾರ್ಜಿನಾ ಅವರ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್‌ ಅವರನ್ನು ತೊಂದರೆಗೆ ಸಿಲುಕಿಸುವ ಸಾಧ್ಯತೆಯಿದೆ.

29 ವರ್ಷ ವಯಸ್ಸಿನ ಜಾರ್ಜಿನಾ ಈಜುಕೊಳದ ಪಕ್ಕದಲ್ಲಿ ಬಿಕಿನಿಯಲ್ಲಿರುವ ತನ್ನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ “ಓವರ್ ಎಕ್ಸ್ ಪೋಸ್ಡ್ ಅಥವಾ ಅರೆ-ನಗ್ನ” ಚಿತ್ರಗಳನ್ನು ನಿಷೇಧಿಸುವ ಸೌದಿ ಕಾನೂನನ್ನು ಉಲ್ಲಂಘಿಸಬಹುದು. ಅರ್ಜೆಂಟೀನಾ ಮೂಲದ ಮಾಡೆಲ್ “ಪ್ರತಿ ಆಕಾಶವು ಅದರ ವರ್ಣವನ್ನು ಹೊಂದಿದೆ” ಎಂಬ ಶೀರ್ಷಿಕೆಯೊಂದಿಗೆ ಫೋಟೋ ಅಪ್ಲೋಡ್ ಮಾಡಿದ್ದಾರೆ.

49.3 ಮಿಲಿಯನ್ ಅನುಯಾಯಿಗಳಿರುವ ಜಾರ್ಜಿನಾ ಅವರ ಪೋಸ್ಟ್ ಐದು ಮಿಲಿಯನ್ ಲೈಕ್‌ ಗಳು ಪಡೆದುಕೊಂಡಿದೆ. ಆದರೆ, ಜಾರ್ಜಿನಾ ಅವರ ಪೋಸ್ಟ್ ಸೌದಿ ಸಮಾಜದ ಸಂಪ್ರದಾಯವಾದಿ ವರ್ಗಗಳಲ್ಲಿ ಆಕ್ರೋಶವನ್ನು ಉಂಟುಮಾಡಬಹುದು. ಈ ದೇಶದಲ್ಲಿ ತೆಳ್ಳಗಿನ, ಪಾರದರ್ಶಕ, ಮತ್ತು ಕಂಠ ತೋರಿಸುವ ಬಟ್ಟೆಗಳನ್ನು ನಿಷೇಧಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next