Advertisement

ರೋಣ: ಧಾರಾಕಾರ ಮಳೆಗೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಬೆಣ್ಣಿಹಳ್ಳ; ಪ್ರವಾಹ ಭೀತಿ

12:42 PM May 21, 2022 | Team Udayavani |

ರೋಣ: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನ ಮೇಣಸಗಿ ಗ್ರಾಮದ ಬಳಿ ಹಾದು ಹೋಗುವ  ಬೆಣ್ಣಿಹಳ್ಳ  ಅಪಾಯವನ್ನು ಮಟ್ಟವನ್ನು ಮೀರಿ ಹರಿಯುತ್ತಿದ್ದು,ನದಿ ಪಾತ್ರ ಇರುವ ಗ್ರಾಮಗಳ ಜನರಲ್ಲಿ ಮತ್ತೆ ಪ್ರವಾಹದ ಭಯ ಹುಟ್ಟಿಸಿದೆ.

Advertisement

ಸದ್ಯ ನವಿಲು ತೀರ್ಥದಿಂದ ಹೆಚ್ಚಿನ ನೀರನ್ನು ಹೊರಬಿಡದೆ ಇರುವುದರಿಂದ ಬೆಣ್ಣಿ ಹಳ್ಳದ ನೀರು ಮಾತ್ರ ಮಲಪ್ರಭಾ ನದಿಯಲ್ಲಿ ಹರಿಯುತ್ತಿದೆ.

ಒಂದೊಮ್ಮೆ ರೇಣುಕಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರ ಬಿಟ್ಟರೆ ಮತ್ತೆ ತಾಲೂಕಿನ ಹೊಳೆಆಲೂರ,ಬಿ.ಎಸ್.ಬೇಲೇರಿ,  ಅಮರಗೋಳ, ಗಾಡಗೋಳಿ, ಹೊಳೆಮಣ್ಣೂರ, ಬಸರಕೋಡ,  ಮೆಣಸಿಗಿ, ಗುಲಗಂಜಿ, ಬೊಪಾಳಾಪೂರ, ಅಸೂಟಿ, ಮಾಳವಾಡ,  ಕುರುವಿನಕೊಪ್ಪ, ಸೇರಿದಂತೆ ಅನೇಕ ಗ್ರಾಮಗಳು ಮತ್ತೆ ಪ್ರವಾಹಕ್ಕೆ ತುತ್ತಾಗುವ ಭಯದಲ್ಲಿ ಇಲ್ಲಿನ ಜನ ಬದುಕುವಂತಾಗಿದೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next