Advertisement

ಶವ ಸಂಸ್ಕಾರಕ್ಕೆ ಹಿರೇಹಳ್ಳವೇ ಗತಿ

06:13 PM Jan 09, 2020 | Naveen |

ರೋಣ: ತಾಲೂಕಿನ ಮುದೇನಗುಡಿ ಹಾಗೂ ಹುಲ್ಲೂರ ಅವಳಿ ಗ್ರಾಮಗಳಿಗೆ ಸ್ಮಶಾನ ಭೂಮಿ ಇಲ್ಲದ ಕಾರಣ ಎರಡು ಗ್ರಾಮಗಳ ಮಧ್ಯದಲ್ಲಿರುವ ಹಿರೇಹಳ್ಳದಲ್ಲಿ ಅಂತ್ಯಸಂಸ್ಕಾರ ಮಾಡುವಂತಾಗಿದೆ.

Advertisement

ಸುಮಾರು ಎರಡು ನೂರು ವರ್ಷಗಳಿಂದ ಈ ಗ್ರಾಮದ ಪಕ್ಕದಲ್ಲಿರುವ ಹೆರಕಲ್‌ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದರು. ಕಳೆದ 40 ವರ್ಷಗಳಿಂದ ಹಳ್ಳದಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಈ ಜಮೀನಿನ ಮಾಲೀಕರು ಇಲ್ಲಿ ಮಾಡದಂತೆ ತಡೆ ಹಾಕಿದ ನಂತರ ಹಿರೇಹಳ್ಳದಲ್ಲಿ ಅಂತ್ಯಕ್ರಿಯೆ ಮಾಡುತ್ತಾ ಬಂದಿದ್ದಾರೆ.

ಮುದೇನಗುಡಿ ಗ್ರಾಮದ ವ್ಯಾಪ್ತಿಯಲ್ಲಿ 500 ಮನೆಗಳಿದ್ದು, 3000 ಜನಸಂಖ್ಯೆ ಹಾಗೂ ಹುಲ್ಲೂರ ಗ್ರಾಮದಲ್ಲಿ 8000 ಸಾವಿರ ಜನಸಂಖ್ಯೆಯಿದ್ದು, 1100 ಮನೆಗಳಿವೆ. ಇಷ್ಟೊಂದು ದೊಡ್ಡ ಜನಸಂಖ್ಯೆ ಹೊಂದಿರುವ ಈ ಗ್ರಾಮಗಳಿಗೆ ಸ್ಮಶಾನಕ್ಕೆ ಸ್ವಂತ ಭೂಮಿಯಿಲ್ಲ. ಕಿಮೀ ದೂರ ಹೋಗಬೇಕು: ಊರಿನ ಪಕ್ಕದಲ್ಲಿಯೇ ಭೂಮಿ ಹೊಂದಿದವರು ನಿಧನರಾದರೆ ತಮ್ಮ ತಮ್ಮ ಹೊಲಗಳಲ್ಲಿ ಅಂತ್ಯಕ್ರಿಯೆ ವಿಧಿ ವಿಧಾನಗಳನ್ನು ನಡೆಸುತ್ತಾರೆ. ಆದರೆ ಬಡವರು, ಹೊಲ ಗದ್ದೆಗಳು ಇಲ್ಲದೆ ಇರುವವರು ಹಳ್ಳದ ದಂಡೆಯಲ್ಲಿ ತಂದು ಅಂತ್ಯಕ್ರಿಯೆ ಮಾಡುತ್ತಾರೆ. ಈ ಹಳ್ಳವು ಎರಡು ಗ್ರಾಮಗಳ ಮಧ್ಯದಲ್ಲಿದೆ. ಎರಡು ಗ್ರಾಮದಿಂದಲೂ 1 ಕಿಮೀ ದೂರವಿದೆ. ಊರಿನವರು ಶವವನ್ನು ಕಿಮೀ ವರೆಗೆ ಹೊತ್ತು ಸಾಗಬೇಕು. ರಾತ್ರಿ ಬಲು ಜೋಕೆ: ಹುಲ್ಲೂರು ಹಾಗೂ ಮುದೇನಗುಡಿ ಗ್ರಾಮದಲ್ಲಿ ರಾತ್ರಿ ಸಮಯದಲ್ಲಿ ಏನಾದರೂ ಹೆಚ್ಚು ಕಮ್ಮಿಯಾಗಿ ಯಾರಾದರೂ ಸತ್ತರೆ ಅವರನ್ನು ಅಂತ್ಯಕ್ರಿಯೆ ಮಾಡಲು ಹಳ್ಳಕ್ಕೆ ಕೊಂಡ್ನೂಯುವಾಗ ಜನರು ಕೂಡಾ ಭಯಭೀತರಾಗುತ್ತಾರೆ. ಏಕೆಂದರೆ ಹಳ್ಳದಲ್ಲಿ ಹುಳು ಹುಪಡಿಗಳೇ ಹೆಚ್ಚಿವೆ. ಇದರಿಂದ ಪ್ರಾಣ ಕಳೆದಕೊಂಡವರ ಅಂತ್ಯಕ್ರಿಯೆ ಮಾಡಲು ಹೋಗಿ ಪ್ರಾಣ ಇದ್ದವರೂ ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿಯಿದೆ.

ಇಲ್ಲಿಯವರೆಗೆ ಆಯ್ಕೆಯಾದ ನಮ್ಮೂರ ಹಾಗೂ ಸಂಬಂಧಿಸಿದ ಜನಪ್ರತಿನಿಧಿ ಗಳಿಂದ ನಮ್ಮೂರಿಗೆ ಒಂದು ಸ್ಮಶಾನ ನೀಡಲು ಸಾಧ್ಯವಾಗಿಲ್ಲ. ಇದು ನೋವಿನ ಸಂಗತಿಯಾಗಿದೆ.
ವೀರಪ್ಪ ಕಲ್ಗುಡಿ,
ಪ್ರಕಾಶ ಪಾಟೀಲ, ಗ್ರಾಮಸ್ಥರು

ಜಿಪಂ ಸದಸ್ಯರಾಗಿ ಆಯ್ಕೆಯಾದ ನಂತರದ ದಿನಗಳಿಂದ ನಮ್ಮೂರಿಗೆ ಒಂದು ಸ್ಮಶಾನ ಮಂಜೂರು ಮಾಡಬೇಕು ಎಂದು ಸರ್ಕಾರದ ಮಟ್ಟದಲ್ಲಿ ಶಾಸಕರ ಮಾರ್ಗದರ್ಶದಲ್ಲಿ ಸ್ಮಶಾನಕ್ಕೆ ಜಾಗವನ್ನು ಗುರುತಿಸಲಾಗಿದೆ. ಸದ್ಯ ಖರೀದಿಸಲು ಜಿಲ್ಲಾಧಿಕಾರಿ ಅನುಮೋದನೆ ಕಳುಹಿಸಿದೆ. ಅನುಮೋದನೆ ನೀಡಿದ ತಕ್ಷಣವೇ ಜಾಗ ಖರೀದಿ ಸಿ ಸ್ಮಶಾನ ನಿರ್ಮಾಣ ಮಾಡಿ ಜನರಿಗೆ ಅಂತ್ಯಕ್ರಿಯೆ ಮಾಡಲು ಅನುಕೂಲ ಮಾಡಿ ಕೊಡಲಾಗುವುದು.
ಪಡಿಯಪ್ಪ ಪೂಜಾರ,
ಹೊಳೆಆಲೂರ ಜಿಪಂ ಸದಸ್ಯ

Advertisement

ಸದ್ಯ ಹುಲ್ಲೂರು ಮತ್ತು ಮುದೇನಗುಡಿ ಗ್ರಾಮಕ್ಕೆ ಸ್ಮಶಾನ ಭೂಮಿ ಬೇಡಿಕೆ ಇರುವ ಬಗ್ಗೆ ಪ್ರಸ್ತಾವನೆ ಬಂದಿದೆ. ಅವರ ಬೇಡಿಕೆಯ ಭೂಮಿ ಹೆಚ್ಚಾಗಿದ್ದರಿಂದ ನಾವು ಪುನಃ ಪರಿಶೀಲನೆ ಮಾಡಿ ಸರ್ಕಾರದ ನಿಯಮದಂತೆ ಪ್ರತಿ ಸಾವಿರ ಜನಸಂಖ್ಯೆಗೆ 20 ಗುಂಟೆ ಭೂಮಿಯಂತೆ ಅಲ್ಲಿರುವ ಜನಸಂಖ್ಯೆಯನ್ನು ಆಧರಿಸಿ ಭೂಮಿಗೆ ಬೇಡಿಕೆಗೆ ಪ್ರಸ್ತಾವನೆ ಸಲ್ಲಿಸಿದರೆ ಖಾಸಗಿಯವರಿಂದ ಭೂಮಿ ಖರೀದಿ ಸಿ ಸ್ಮಶಾನವನ್ನು ನಿರ್ಮಿಸಿ ಕೊಡಲಾಗುವುದು.
ರಾಯಪ್ಪ ಹುನಸಗಿ,
ಉಪ ವಿಭಾಗಾಧಿಕಾರಿ ಗದಗ

Advertisement

Udayavani is now on Telegram. Click here to join our channel and stay updated with the latest news.

Next