Advertisement

ಸಂಸ್ಕೃತಿ ಉಳಿಸುವಲ್ಲಿ ಮಹಿಳೆ ಪಾತ್ರ ಮುಖ್ಯ

03:16 PM Mar 25, 2022 | Team Udayavani |

ಗೋಕಾಕ: ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಮಹಿಳೆಯರ ಪಾತ್ರ ಪ್ರಮುಖ ಎಂದು ಘಟಪ್ರಭಾ ಕೆಂಪಯ್ಯಸ್ವಾಮಿ ಮಠದ ಶ್ರೀ ಡಾ| ಅಲ್ಲಮಪ್ರಭು ಸ್ವಾಮಿಗಳು ಹೇಳಿದರು.

Advertisement

ತಾಲೂಕಿನ ಕುಂದರಗಿಯ ಅಡವಿಸಿದ್ದೇಶ್ವರ ಮಠದ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಕುಂದರನಾಡೋತ್ಸವ-2022ರ ಮಹಿಳಾ ಸಮಾವೇಶ ಹಾಗೂ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಕ್ಕಮಹಾದೇವಿಯವರು ಬಸವಣ್ಣನ ಕಾಲದಲ್ಲಿ ಮಹಿಳಾ ಕ್ರಾಂತಿ ಮಾಡಿದ್ದರು. ಸಮಾಜದಲ್ಲಿ ಪ್ರತಿ ಮನೆ ಉದ್ಧಾರವಾಗಬೇಕೆಂದರೆ ಮಹಿಳೆಯ ಪಾತ್ರ ಪ್ರಮುಖವಾದದ್ದು. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಂತಹ ಮಹನೀಯರು ನಮ್ಮ ದೇಶ, ಮಹಿಳೆಯರಿಗೆ ಆದರ್ಶವಾಗಬೇಕು. ನಾಡಿನಲ್ಲಿ ಅಕ್ಕನ ಬಳಗವನ್ನು ಸಂಸ್ಥಾಪಿಸಿ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದವರು ಹಾನಗಲ್‌ ಶ್ರೀಗಳು. ಪ್ರತಿಯೊಬ್ಬ ಮಹಿಳೆಯು ಶಿಕ್ಷಣ ಪಡೆದು ಉನ್ನತ ಹಂತಕ್ಕೆ ತಲುಪಬೇಕು ಎಂದು ಆಶೀರ್ವದಿಸಿದರು.

ಬೆಳಗಾವಿ ನಾಗನೂರು ರುದ್ರಕ್ಷಿಮಠದ ಶ್ರೀ ಡಾ|ಅಲ್ಲಮಪ್ರಭು ಸ್ವಾಮಿಗಳು ಮಾತನಾಡಿ, ಪ್ರತಿಯೊಂದು ವಿಷಯದಲ್ಲಿ ತಾಯಿಯನ್ನು ಕಾಣುವ ದೇಶ ಭಾರತ. ಮಹಿಳೆಯರಿಗೆ ಇರುವ ಕರುಣೆ ಬೇರೆ ಯಾವುದೇ ವಸ್ತುವಿನಲ್ಲಿ ಕಾಣಲು ಅಸಾಧ್ಯ. ಅಮರಸಿದ್ದೇಶ್ವರ ಸ್ವಾಮಿಗಳು ಶ್ರೀ ಮಠವನ್ನು ನಾಡಿನ ಶ್ರೇಷ್ಠ ಮಠವಾಗಿಸಲು ಶ್ರಮಿಸುತ್ತಿದ್ದು, ಅವರಿಗೆ ಪ್ರತಿಯೊಬ್ಬರು ಬೆನ್ನೆಲುಬಾಗಿ ನಿಲ್ಲಬೇಕು ಎಂದರು.

ಮಹಿಳಾ ಸಮಾವೇಶ ಅಂಗವಾಗಿ ಶ್ರೀಮಠದ ಭಕ್ತರಾದ ಪಿಎಸ್‌ಐ ಗೀತಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಮಠದಿಂದ ಮುತ್ತೈದೆಯರಿಗೆ ಉಡಿ ತುಂಬಲಾಯಿತು.

Advertisement

ಮೂಲಗದ್ದೆಯ ಚನ್ನಬಸವ ಸ್ವಾಮಿಗಳು, ವಿಶ್ವನಾಥ ದೇವರು, ಅರಳಿಕಟ್ಟಿಯ ಚನ್ನಬಸವ ದೇವರು, ಘಟಪ್ರಭಾದ ಅನ್ನದಾನಿ ದೇವರು, ಯುವ ಧುರೀಣರಾದ ಪ್ರಕಾಶಗೌಡ್ರು ಪೋಲಿಸ್‌ಗೌಡ್ರು, ಬೆಳಗಾವಿ ಸಮಾಜ ಸೇವಕರಾದ ಮಹಾಂತೇಶ ವಕ್ಕುಂದ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next