Advertisement

ತನ್ನ ಜೆರ್ಸಿ ನಂಬರ್ ‘45’ರ ಹಿಂದಿನ ಕಥೆ ಹೇಳಿದ ರೋಹಿತ್ ಶರ್ಮಾ

04:05 PM Nov 05, 2021 | Team Udayavani |

ದುಬೈ: ಭಾರತೀಯ ಸೀಮಿತ ಓವರ್ ಗಳ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ತನ್ನ ಜೆರ್ಸಿ ನಂಬರ್ 45ರ ಹಿಂದಿನ ಕಥೆಯನ್ನು ಬಯಲು ಮಾಡಿದ್ದಾರೆ. ತಾನು ಯಾಕೆ 45 ನಂಬರ್ ಆಯ್ಕೆ ಮಾಡಿದೆ ಎನ್ನುವು ಕುರಿತು ರೋಹಿತ್ ಮಾತನಾಡಿದ್ದಾರೆ.

Advertisement

ಭಾರತಕ್ಕೆ ಪದಾರ್ಪಣೆ ಮಾಡಿದ ನಂತರ, ಓಪನರ್ ರೋಹಿತ್ ಶರ್ಮಾ ಯಾವಾಗಲೂ 45 ಅನ್ನು ತಮ್ಮ ಜರ್ಸಿ ಸಂಖ್ಯೆಯಾಗಿ ಬಳಸಿದ್ದಾರೆ. 34 ವರ್ಷದ ರೋಹಿತ್ 2007 ರಲ್ಲಿ ತಮ್ಮ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು.

ಇದನ್ನೂ ಓದಿ:ಕತ್ತಲೆಯಿಂದ ಹೊರತರುವ ಸಾಮರ್ಥ್ಯ ಕೊಹ್ಲಿಯಲ್ಲಿದೆ: ಅನುಷ್ಕಾ ಭಾವನಾತ್ಮಕ ಪತ್ರ

ಐಸಿಸಿಯ ಮಾಧ್ಯಮ ತಂಡದೊಂದಿಗಿನ ಇತ್ತೀಚಿನ ಸಂವಾದದಲ್ಲಿ ಟೀಮ್ ಇಂಡಿಯಾ ಉಪನಾಯಕ ತಮ್ಮ ಸಂಖ್ಯೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದರು. ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಭಾರತದ ಮುಂಬರುವ ನಿರ್ಣಾಯಕ ಸೂಪರ್ 12 ಪಂದ್ಯಕ್ಕೂ ಮುಂಚಿತವಾಗಿ, ಐಸಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದೆ. ಅದರಲ್ಲಿ ರೋಹಿತ್ ತನ್ನ ಜರ್ಸಿ ಸಂಖ್ಯೆ ಬಗ್ಗೆ ಮತ್ತು ಆಟದ ಪ್ರಬುದ್ಧತೆಯ ಬಗ್ಗೆ ಮಾತನಾಡಿದ್ದಾರೆ.

Advertisement

ತನ್ನ ಜರ್ಸಿ ಸಂಖ್ಯೆಯ ಕ್ರೆಡಿಟ್ ನ್ನು ತನ್ನ ತಾಯಿಗೆ ನೀಡುತ್ತಾ, “ನನ್ನ ತಾಯಿಗೆ ನಂಬರ್ ಇಷ್ಟವಾಗಿದೆ. ಜರ್ಸಿ ಸಂಖ್ಯೆಯ ಬಗ್ಗೆ ನಾನು ನನ್ನ ತಾಯಿಯನ್ನು ಕೇಳಿದೆ, ಅವರು 45 ನ್ನು ಸೂಚಿಸಿದರು. ಅದು ನಿನಗೆ ಒಳ್ಳೆಯದಾಗುತ್ತದೆ. ಅದನ್ನೇ ಬಳಸು ಎಂದು ಹೇಳಿದರು” ಎಂದು ರೋಹಿತ್ ಹೇಳಿದರು.

ಭಾರತ ಇಂದಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next