Advertisement

ಬುಮ್ರಾ ಬದಲಿಗೆ ವಿಶ್ವಕಪ್ ನಲ್ಲಿ ಆಡುವುದು ಯಾರು?: ರೋಹಿತ್ ಹೇಳಿದ್ದೇನು?

11:50 AM Oct 05, 2022 | Team Udayavani |

ಇಂದೋರ್: ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಗೆದ್ದ ಭಾರತ ತಂಡವು ಟಿ20 ವಿಶ್ವಕಪ್ ಗೆ ತಯಾರಿ ಮಾಡಿಕೊಳ್ಳುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಎರಡನೇ ದರ್ಜೆಯ ತಂಡ ಆಡುವ ಕಾರಣ ಟಿ20 ತಂಡವು ಎರಡು ದಿನದಲ್ಲಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳಸಲಿದೆ.

Advertisement

ದ.ಆಫ್ರಿಕಾ ವಿರುದ್ಧದ ಮೂರನೇ ಪಂದ್ಯವನ್ನು ಸೋತ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, “ ತಂಡದಲ್ಲಿ ಇನ್ನೂ ಸುಧಾರಣೆಗೆ ಅವಕಾಶವಿದೆ. ಮೂರು ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದರೂ ನಾವು ಯಾವತ್ತೂ ಪ್ರದರ್ಶನ ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸುತ್ತೇವೆ” ಎಂದರು.

ಬೌಲಿಂಗ್ ವಿಭಾಗದ ಬಗ್ಗೆ ಸ್ವಲ್ಪ ಹೆಚ್ಚಿನ ಜಾಗೃತೆ ಮಾಡಬೇಕಿದೆ. ಪವರ್ ಪ್ಲೇ ಮತ್ತು ಡೆತ್ ನಲ್ಲಿ ಇನ್ನಷ್ಟು ಗಮನ ಹರಿಸಬೇಕಿದೆ ಎಂದರು.

ಇದನ್ನೂ ಓದಿ:ರಮ್ಯಾ – ರಾಜ್. ಬಿ.ಶೆಟ್ಟಿ ಕಾಂಬಿನೇಷನ್‌ ನಲ್ಲಿ ಬರುತ್ತಿದೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’

ವಿಶ್ವಕಪ್ ಆರಂಭಕ್ಕೂ ಕೆಲವು ದಿನಗಳ ಮೊದಲೇ ಆಸ್ಟ್ರೇಲಿಯಾಗೆ ಪ್ರಯಾಣ ಮಾಡತ್ತಿರುವ ಬಗ್ಗೆ ಮಾತನಾಡಿದ ರೋಹಿತ್, “ಬಹಳಷ್ಟು ಹುಡುಗರು ಇದುವರೆಗೆ ಆಸ್ಟ್ರೇಲಿಯಾಕ್ಕೆ ಹೋಗಿಲ್ಲ. ಅದಕ್ಕಾಗಿಯೇ ನಾವು ಬೇಗನೆ ಹೋಗಲು ಬಯಸಿದ್ದೇವೆ. ಪರ್ತ್‌ನ ಕೆಲವು ಬೌನ್ಸಿ ಪಿಚ್‌ಗಳಲ್ಲಿ ಆಟವಾಡಿ ಮತ್ತು ನಾವು ಅಲ್ಲಿ ಏನು ಮಾಡಬಹುದು ಎಂಬುದನ್ನು ನೋಡಬೇಕಿದೆ. 15 ಆಟಗಾರರಲ್ಲಿ, ಕೇವಲ 7-8 ಜನರು ಮಾತ್ರ ಅಲ್ಲಿ ಈ ಮೊದಲು ಆಡಿದ್ದಾರೆ. ನಾವು ಒಂದೆರಡು ಅಭ್ಯಾಸ ಆಟಗಳನ್ನು ಆಯೋಜಿಸಿದ್ದೇವೆ ಎಂದರು.

Advertisement

ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯಗೊಂಡು ವಿಶ್ವಕಪ್ ನಿಂದ ಹೊರಬಿದ್ದ ಬಗ್ಗೆ ಮಾತನಾಡಿದ ಕ್ಯಾಪ್ಟನ್, “ಬುಮ್ರಾ ನಮಗೆ ದೊಡ್ಡ ಮಿಸ್.  ಆದರೆ ಕೆಲವು ಹುಡುಗರ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದೇವೆ. ನಾವು ಆಸ್ಟ್ರೇಲಿಯಾ ತಲುಪಿದ ನಂತರ ಇದರ ಬಗ್ಗೆ ನಿರ್ಧಾರ ಮಾಡುತ್ತೇವೆ”ಎಂದು ಪಂದ್ಯದ ನಂತರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next