Advertisement

ಮೇಜರ್ ಸರ್ಜರಿಗೆ ಮುಂದಾದ ಬಿಸಿಸಿಐ: ನಾಯಕತ್ವ ಕಳೆದುಕೊಳ್ಳುವ ಭೀತಿಯಲ್ಲಿ ರೋಹಿತ್

09:51 AM Nov 19, 2022 | Team Udayavani |

 ಮುಂಬೈ: ಟಿ20 ವಿಶ್ವಕಪ್ ಕೂಟ ಅಂತ್ಯವಾಗಿ ವಾರ ಕಳೆಯವಷ್ಟರಲ್ಲಿ ಭಾರತ ತಂಡದಲ್ಲಿ ಬದಲಾವಣೆಯ ಲಕ್ಷಣಗಳು ಕಾಣಲಾರಂಭಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವು ಸೆಮಿ ಫೈನಲ್ ನಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಆದರೆ ಭಾರತ ತಂಡದ ಹಿರಿಯರ ಪ್ರದರ್ಶನದ ಮೇಲೆ ಟೀಕೆಗಳು ಕೇಳಿಬಂದಿದೆ.

Advertisement

ಭಾರತದಲ್ಲಿ ಇಷ್ಟೆಲ್ಲಾ ಯುವ ಪ್ರತಿಭೆಗಳಿದ್ದರೂ ಇನ್ನೂ ಹಿರಿಯರ ಅವಲಂಬನೆ ಯಾಕೆ? ಟಿ20ಯಲ್ಲಿ ಏಕದಿನ ಕ್ರಿಕೆಟ್ ನಂತೆ ಆಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಮುಂದಿನ ಟಿ20 ವಿಶ್ವಕಪ್ ಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗ ಹಲವು ಪ್ರಯೋಗಗಳನ್ನು ಮಾಡಲು ಬಿಸಿಸಿಐ ಮುಂದಾಗಿದೆ.

ಇದರ ಮೊದಲ ಭಾಗ ಎಂಬಂತೆ ಬಿಸಿಸಿಐ ಶುಕ್ರವಾರ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ವಜಾ ಮಾಡಿದೆ. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯ ಬಗ್ಗೆ ಕಳೆದೊಂದು ವರ್ಷದಿಂದ ಕೆಲವು ಅಪಸ್ವರಗಳು ಕೇಳಿಬಂದಿತ್ತು. ಇದೀಗ ಪೂರ್ಣ ಸಮಿತಿಯನ್ನೇ ಬರ್ಖಾಸ್ತು ಮಾಡಿರುವ ಬಿಸಿಸಿಐ, ಹೊಸ ಅರ್ಜಿ ಆಹ್ವಾನ ಮಾಡಿದೆ.

ಇದನ್ನೂ ಓದಿ:ತನ್ನ ಪತ್ನಿಯನ್ನು ಹಿಡಿದುಕೊಂಡ ಎಂಬ ವಿಚಾರಕ್ಕೆ ಕೆಲಸಗಾರನ ಕೊಲೆ; ಆರೋಪಿಗೆ ಜೀವವಾಧಿ ಶಿಕ್ಷೆ

ಇದೀಗ ಟೀಂ ಇಂಡಿಯಾದ ನಾಯಕತ್ವ ಬದಲಾವಣೆಗೆ ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ. ಮೂರು ಮಾದರಿಗೆ ಮೂವರು ನಾಯಕರನ್ನು ನೇಮಿಸಲು ಬಿಸಿಸಿಐ ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ. ಹೊಸ ಆಯ್ಕೆ ಸಮಿತಿಯು ಈ ಪ್ರತ್ಯೇಕ ನಾಯಕರನ್ನು ನೇಮಿಸುವ ಜವಾಬ್ದಾರಿಯನ್ನು ಹೊಂದಿದೆ ಎನ್ನುತ್ತಿವೆ ವರದಿಗಳು.

Advertisement

ಪ್ರಸ್ತುತ, ರೋಹಿತ್ ಶರ್ಮಾ ಎಲ್ಲಾ ಫಾರ್ಮಾಟ್‌ ಗಳಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ, ಆದರೆ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್‌ ನ ನಡೆಯುತ್ತಿರುವ ಟಿ20 ಕ್ರಿಕೆಟ್ ಪ್ರವಾಸಕ್ಕೆ ತಂಡದ ನಾಯಕರಾಗಿದ್ದಾರೆ. ಮುಂದಿನ ಟಿ20 ತಂಡದ ನಾಯಕತ್ವ ಪಾಂಡ್ಯ ಪಾಲಾಗುವ ಸಾಧ್ಯತೆ ಹೆಚ್ಚಿದೆ.

35 ವರ್ಷ ವಯಸ್ಸಿನ ರೋಹಿತ್ ಶರ್ಮಾ ಮುಂದಿನ ವರ್ಷ ತವರು ನೆಲದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ಗೆ ಅವರನ್ನು ನಾಯಕನಾಗಿ ಇರಿಸಿಕೊಳ್ಳಲು ಮಂಡಳಿಯು ಬಯಸಬಹುದು. ಆದರೆ 2024 ರಲ್ಲಿ ಟಿ 20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಪಾಂಡ್ಯ ಅವರನ್ನು ಬೆಂಬಲಿಸಲಾಗುತ್ತಿದೆ. ಇತ್ತೀಚಿನ ಆವೃತ್ತಿಯಲ್ಲಿ ಕಾಣಿಸಿಕೊಂಡಿರುವ ಹೆಚ್ಚಿನ ಹಿರಿಯ ಆಟಗಾರರು ಮುಂದಿನ ಆವೃತ್ತಿಗೆ ತಂಡದಲ್ಲಿ ಇರುವ ಸಾಧ್ಯತೆಯಿಲ್ಲ.

ಮತ್ತೊಂದೆಡೆ ಕೋಚ್ ರಾಹುಲ್ ದ್ರಾವಿಡ್ ಅವರ ಕೆಲಸಕ್ಕೂ ಕುತ್ತು ಬಂದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next