Advertisement

ಕೊಹ್ಲಿ ನಾಯಕತ್ವಕ್ಕೆ ರೋಹಿತ್‌ ಸವಾಲು ?

12:19 PM May 24, 2017 | |

ಮುಂಬೈ: ಮುಂಬೈ ಇಂಡಿಯನ್ಸ್‌ ತಂಡವನ್ನು ರೋಹಿತ್‌ ಶರ್ಮ 3ನೇ ಬಾರಿಗೆ ಐಪಿಎಲ್‌ ಚಾಂಪಿಯನ್‌ ಪೀಠದ ಮೇಲೆ ಕೂರಿಸಿದ್ದಾರೆ. ಇದರ ಬಿಸಿ ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ತಟ್ಟುವ ಸಾಧ್ಯತೆಯಿದೆ! ನಾಯಕತ್ವದಲ್ಲಿ ರೋಹಿತ್‌ ಯಶಸ್ವಿಯಾಗಿರುವುದರಿಂದ ರೋಹಿತ್‌ರನ್ನು ಭಾರತ ಟಿ20 ತಂಡದ ನಾಯಕನನ್ನಾಗಿ ನೇಮಿಸಬೇಕೆಂದು ಕೆಲವರು ಅಭಿಪ್ರಾಯಿಸಿದ್ದಾರೆ.

Advertisement

ಸದ್ಯ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್‌ ತಂಡ ಯಶಸ್ವಿಯಾಗುತ್ತಿದೆ. ಆದರೆ ವಿದೇಶದಲ್ಲಿ ಕೊಹ್ಲಿ ನಾಯಕತ್ವ ಸಾಮರ್ಥ್ಯ ಇನ್ನೂ ಪರೀಕ್ಷೆಗೊಳಪಟ್ಟಿಲ್ಲ. ಒಂದು ವೇಳೆ ಅವರು ವಿಫ‌ಲರಾದ ಪಕ್ಷದಲ್ಲಿ ರೋಹಿತ್‌ ಅದಕ್ಕೆ ಪರ್ಯಾಯ ಎನಿಸಬಹುದು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಹಿತ್‌, ನಾನು ಮುಂದಿನ ಬಗ್ಗೆ ಯೋಚಿಸುವುದಿಲ್ಲ. ಅವಕಾಶ ಬಂದರೆ ಎರಡೂ ಕೈಗಳಿಂದ ಬಾಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next