Advertisement

ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ರೋಹಿತ್‌

12:30 AM May 01, 2020 | Sriram |

ಮುಂಬಯಿ: ಕಳೆದ 12 ವರ್ಷಗಳಿಂದ ಐಪಿಎಲ್‌ ತಂಡದ ಆಟಗಾರರೊಂದಿಗೆ ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತಿದ್ದ “ಹಿಟ್‌ ಮ್ಯಾನ್‌’ ಖ್ಯಾತಿಯ ರೋಹಿತ್‌ ಶರ್ಮ, ಗುರುವಾರ ತಮ್ಮ 33ನೇ ಜನ್ಮದಿನವನ್ನು ಕುಟುಂಬದವರೊಂದಿಗೆ ಸರಳ ರೀತಿಯಲ್ಲಿ ಆಚರಿಸಿ ಸಂಭ್ರಮಿಸಿದರು.

Advertisement

ರೋಹಿತ್‌ ಶರ್ಮ ಅವರ ಪತ್ನಿ ರಿತಿಕಾ  ಮತ್ತು ಪುತ್ರಿ ಸಮೈರಾ ಈ ಖುಷಿಯಲ್ಲಿ ಭಾಗಿಯಾದರು. ಟೀಮ್‌ ಇಂಡಿಯಾದ ಹಾಲಿ-ಮಾಜಿ ಕ್ರಿಕೆಟಿಗ ರನೇಕರು ರೋಹಿತ್‌ಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪತ್ನಿ ರಿತಿಕಾ “ಹ್ಯಾಪ್ಪಿ ಬರ್ತ್‌ಡೇ, ಲವ್‌ ಯೂ ರೋ’ ಎಂಬ ಸಂದೇಶದೊಂದಿಗೆ ಗಮನ ಸೆಳೆದರು. ಇನ್‌ಸ್ಟಾಗ್ರಾಮ್‌ನಲ್ಲಿ ರೋಹಿತ್‌ ಜತೆಗಿರುವ ಅನೇಕ ಚಿತ್ರಗಳನ್ನು ಅವರು ಪೋಸ್ಟ್‌ ಮಾಡಿದರು. ಇದರ ಬೆನ್ನಲ್ಲೇ ಅಭಿಮಾನಿಗಳಿಂದ ಶುಭ ಸಂದೇಶದ ಪ್ರವಾಹವೇ ಹರಿದು ಬಂತು.

ರೋಹಿತ್‌ ಈ ಸಂದರ್ಭದಲ್ಲಿ ಮಾಧ್ಯಮದವರಿಂದ ಅಂತರ ಕಾಯ್ದುಕೊಂಡಿದ್ದರು. ಕೆಲವು ದಿನಗಳ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ, “ವಿಶ್ವಕಪ್‌ ಗೆಲ್ಲುವುದು ನಮ್ಮೆಲ್ಲರ ಕನಸು. ನನ್ನದೂ ಇದೇ ಆಸೆ…’ ಎಂದು ಹೇಳಿದ್ದರು.

ಕೋವಿಡ್‌-19 ಕಾರಣದಿಂದ ಈ ಬಾರಿಯ ಐಪಿಎಲ್‌ ನಡೆಯುವುದು ಇನ್ನೂ ಅನಿಶ್ಚಿತತೆಯಲ್ಲೇ ಇರುವುದರಿಂದ ಕ್ರಿಕೆಟಿಗರೆಲ್ಲ ಸದ್ಯ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ಬರ್ತ್‌ಡೇ ಆಚರಿಸಿಕೊಳ್ಳುವವರಿಗೆ ಇದೊಂದು ಸದವಕಾಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next