Advertisement

ರೋಹಿಣಿ ಸಿಂಧೂರಿಗೆ ನ್ಯಾಯಾಂಗ ನಿಂದನೆ ಸಂಕಷ್ಟ

04:43 PM Feb 19, 2021 | Team Udayavani |

ಬೆಂಗಳೂರು: ಕೋರ್ಟ್‌ ಆದೇಶವಿದ್ದರೂ ಜಮೀನು ಖಾತೆ ಮಾಡಿಕೊಡದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿಸಿಂಧೂರಿಗೆ “ನ್ಯಾಯಾಂಗ ನಿಂದನೆ’ ಸಂಕಷ್ಟ ಎದುರಾಗಿದೆ.

Advertisement

ನ್ಯಾಯಾಲಯ ಆದೇಶ ನೀಡಿದ ನಂತರವೂ ವ್ಯಕ್ತಿಯೊಬ್ಬರಿಗೆ ಜಮೀನಿನ ಖಾತೆ ಮಾಡಿಕೊಡದ ಹಿನ್ನೆಲೆಯಲ್ಲಿ ದಾಖಲಿಸಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿರೋಹಿಣಿ ಸಿಂಧೂರಿ ವಿರುದ್ಧ ಹೈಕೋರ್ಟ್‌  ಮಾ. 8ಕ್ಕೆ ಆರೋಪ ನಿಗದಿಪಡಿಸಲಿದೆ. ಅಲ್ಲದೇ ತಹಶೀಲ್ದಾರ್‌ ನ್ಯಾಯಾಂಗ ನಿಂದನೆ ಎದುರಿಸಬೇಕಾಗಿದೆ. ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಆದೇಶಿಸಿದ್ದರೂ ಭೂಮಿಯ ಖಾತೆ ಮಾಡಿ ಕೊಟ್ಟಿಲ್ಲ ಎಂದು ಆರೋಪಿಸಿ ಮೈಸೂರಿನ ಎಚ್‌.ಬಿ ಅಶೋಕ್‌ ಸೇರಿ 5 ಮಂದಿ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯ ಮೂರ್ತಿ ಎ.ಎಸ್‌ ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ರೋಹಿಣಿ ಸಿಂಧೂರಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗಿ, ಜಮೀನು  ಖಾತೆ ಮಾಡಿ ಕೊಡಲು ಹಲವು ಸಮಸ್ಯೆಗಳಿವೆ. ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ವಿವಾದಿತ ಭೂಮಿಗೆ ಹಲವರುಹಕ್ಕು ಸಾಧನೆ ಮಾಡಲು ಮುಂದಾಗಿದ್ದಾರೆ.

ಹೀಗಾಗಿ ಈ ಸಂಬಂಧ ದಾಖಲೆಗಳನ್ನು ಸಲ್ಲಿಸಲು ಹಾಗೂ ನ್ಯಾಯಾಲಯದ ಆದೇಶ ಪಾಲಿ ಸಲು 3 ತಿಂಗಳ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯ ಪೀಠ, ಈಗ ನೀವು ದಾಖಲೆಗಳನ್ನು ಏಕೆ ಸಲ್ಲಿಸು  ತ್ತೀರಿ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾ ಲಯ ಆದೇಶ ನೀಡಿದೆ.

ಇದನ್ನೂ ಓದಿ:ಭಕ್ತರ ಹೃದಯ ಗೆದ್ದ ಪ್ರಸನ್ನ  ಪಂಪಾ ವಿರೂಪಾಕ್ಷೇಶ್ವರ

Advertisement

ಈ ಹಂತದಲ್ಲಿ ನೀವು ದಾಖಲೆ ಗಳನ್ನು ಪರಿ ಶೀಲಿಸುವುದು, ಸಲ್ಲಿಸು ವುದು ಎಂದರೆ ಏನರ್ಥ ಎಂದು ತರಾಟೆಗೆ ತೆಗೆದು ಕೊಂಡಿತು. ಪ್ರಕರಣದಲ್ಲಿ ಡೀಸಿ ರೋಹಿಣಿ ಸಿಂಧೂರಿ ಹಾಗೂ ತಹಶೀಲ್ದಾರ್‌ ಕೆ.ಆರ್‌. ರಕ್ಷಿತ್‌ ನ್ಯಾಯಾಲಯದ ಆದೇಶವನ್ನು ತಿಳಿದಿದ್ದೂ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಈ ಇಬ್ಬರೂ ಆರೋಪಿತರ ಅಧಿಕಾರಿಗಳ ವಿರುದ್ಧ ಮಾರ್ಚ್‌ 8ರಂದು ಆರೋಪ ನಿಗದಿಪಡಿಸ ಲಾಗುವುದು. ಇಬ್ಬರೂ ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಿರಬೇಕು ಎಂದಿತು. ಇದೇ ವೇಳೆ ಇತರೆ ಮೂರು ನ್ಯಾಯಾಂಗ ನಿಂದನೆ ಅರ್ಜಿಗಳಿಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next