Advertisement
ಶನಿವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ಸ್ವಿಜರ್ಲೆಂಡ್‌ನ ಫೆಡರರ್ 7-6(7-3), 6-4, 6-4 ರಿಂದ ಜರ್ಮನಿಯ ಮಿಸಾc ಜವರೆವ್ ವಿರುದ್ಧ ಹೋರಾಟದ ಜಯಸಾಧಿಸಿದರು. ಖ್ಯಾತ ಟೆನಿಸ್ ಆಟಗಾರ ಫೆಡರರ್ ಮತ್ತು ಜರ್ಮನಿಯ ವಿಶ್ವ ನಂ.30ನೇ ಶ್ರೇಯಾಂಕಿತ ಆಟಗಾರ ಮಿಸಾc ನಡುವೆ ಮೊದಲನೇ ಸೆಟ್‌ನಲ್ಲಿ ಭಾರೀ ಹೋರಾಟ ಕಂಡುಬಂತು. ಆದರೆ ಅಂತಿಮವಾಗಿ ಅನುಭವಿ ಆಟಗಾರ ಫೆಡರರ್ ಸೆಟ್ ವಶಪಡಿಸಿಕೊಂಡು ಮೇಲುಗೈ ಸಾಧಿಸಿದರು. ನಂತರ ನಡೆದ ಎರಡೂ ಸೆಟ್‌ನಲ್ಲಿ ಫೆಡರರ್ ಜಯಸಾಧಿಸಿ ಪ್ರೀ ಕ್ವಾರ್ಟರ್‌ಗೆ ಪ್ರವೇಶಿಸಿದರು. ಕೂಟದಲ್ಲಿ ಈಗಾಗಲೇ ಆ್ಯಂಡಿ ಮರ್ರೆ, ನೋವಾಕ್ ಜೊಕೊವಿಚ್, ರಾಫೆಲ್ ನಡಾಲ್ ಕೂಡ ಪ್ರೀ ಕ್ವಾರ್ಟರ್‌ಗೆ ಪ್ರವೇಶಿಸಿದ್ದಾರೆ. ಹೀಗಾಗಿ 7 ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ವಿಜೇತ ಫೆಡರರ್‌ಗೆ ಈ ಬಾರಿ ಭರ್ಜರಿ ಸವಾಲು ಎದುರಾಗಲಿದೆ.
ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರೀಕ್ವಾರ್ಟರ್‌ಗೆ ಪ್ರವೇಶಿಸಿದ್ದಾರೆ, ಭಾರತದ ಮತ್ತೂಬ್ಬ ತಾರಾ ಆಟಗಾರ ರೋಹನ್ ಬೋಪಣ್ಣ ಮಿಶ್ರ ಡಬಲ್ಸ್‌ನಲ್ಲಿ ಪ್ರೀಕ್ವಾರ್ಟರ್‌ಗೆ ಲಗ್ಗೆ ಹಾಕಿದ್ದಾರೆ. ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಕ್ರೊವೇಶಿಯಾದ ಇವಾನ್ ದೊಡಿಗ್ ಜೋಡಿ 7-6(7-5), 6-2 ರಿಂದ ಜಪಾನ್‌ನ ಯೊಸುಕೆ ವಾಟನುಕಿ ಮತ್ತು ಮಕೊಟೊ ನಿನಾಮಿಯ್ಯ ಜೋಡಿ ವಿರುದ್ಧ ಜಯ ದಾಖಲಿಸಿದರು. ಮತ್ತೂಂದು ಮಿಶ್ರ ಡಬಲ್ಸ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಕೆನಡಾದ ಗಾಬ್ರಿಯೆಲಾ ಡಬೊÅಸ್ಕಿ ಜೋಡಿ 7-6(7-2), 7-5 ರಿಂದ ಫ್ರಾನ್ಸ್‌ನ ಫ್ಯಾಬ್ರಿಕ್ ಮಾರ್ಟಿನ್ ಮತ್ತು ರೋಮೆನಿಯಾದ ರಾಲುಕಾ ಒಲರು ವಿರುದ್ಧ ವಿಜಯ ಸಾಧಿಸಿದರು.