Advertisement

ವಿಜಯನಗರ ಕಾಲುವೆಗಳ ದುರಸ್ತಿ ನೆಪದಲ್ಲಿ ಅಂಜನಾದ್ರಿ ಬೆಟ್ಟದ ಕಲ್ಲು ಒಡೆದು ಧ್ವಂಸ

09:24 AM Jul 24, 2021 | Team Udayavani |

ಗಂಗಾವತಿ: ಐತಿಹಾಸಿಕ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಕಾಮಗಾರಿ ನೆಪದಲ್ಲಿ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಕಲ್ಲುಗಳನ್ನು ಒಡೆದು ಹಾಕುತ್ತಿರುವ ಘಟನೆ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಹತ್ತಿರ ನಡೆಯುತ್ತಿದೆ. ಸ್ಮಾರಕಗಳು ಮತ್ತು ಜೀವ ವೈವಿಧ್ಯತೆಗಳ ಸಂರಕ್ಷಣೆ ಮಾಡುವ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ಗುತ್ತಿಗೆ ಪಡೆದವರು ಅಂಜನಾದ್ರಿ ಬೆಟ್ಟದ ಕಲ್ಲುಗಳನ್ನು ಒಡೆದು ಹಾಕುತ್ತಿದ್ದಾರೆ.

Advertisement

ಪಂಪಾ ಸರೋವರ ಮತ್ತು ಅಂಜನಾದ್ರಿ ಮಧ್ಯೆ ಹರಿಯುವ ವಿಜಯನಗರ ಪುರಾತನ ಕಾಲುವೆಯ ಶಾಶ್ವತ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದೆ. ಈ ಸ್ಮಾರಕ ಉಳಿಸುವ ಕಾರ್ಯ ಮಾಡಬೇಕಾಗಿದ್ದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳದಲ್ಲಿ ಇರದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದಾಗಿ ಕಾಮಗಾರಿ ಮಾಡುತ್ತಿರುವವರು ಇಲ್ಲಿರುವ ಅಮೂಲ್ಯವಾದ ಬೆಟ್ಟದ ಕಲ್ಲುಗಳನ್ನು ಕಾಲುವೆ ಕಾಮಗಾರಿಗೆ ಅಡ್ಡ ಬರುತ್ತವೆ ಎಂಬ ನೆಪದಲ್ಲಿ ಒಡೆದು ಹಾಕುತ್ತಿದ್ದಾರೆ.

ಇದನ್ನೂ ಓದಿ:ಲಸಿಕೆ ನೀಡಿಕೆಗೆ ಕಾಲ ಮಿತಿ ಇಲ್ಲ : ವರ್ಷಾಂತ್ಯಕ್ಕೆ ಪೂರ್ತಿಗೊಳ್ಳುವ ವಿಶ್ವಾಸ

ವಿಜಯನಗರ ಕಾಲದಲ್ಲಿ ನಿರ್ಮಾಣವಾಗಿರುವ ಈ ಕಾಲುವೆಗಳನ್ನು ಪ್ರಕೃತಿಯ ಮಧ್ಯದಲ್ಲಿಯೇ ಪ್ರಕೃತಿಯನ್ನ ಉಳಿಸಿ ಅಂದು ಕಾಲುವೆಗಳನ್ನು ನಿರ್ಮಾಣ ಮಾಡಲಾಗಿತ್ತು. ಇದೀಗ ನವೀಕರಣ ನೆಪದಲ್ಲಿ ಹಳೆಯ ವಿನ್ಯಾಸವನ್ನು ಬಿಟ್ಟು ಹೊಸ ವಿನ್ಯಾಸಕ್ಕಾಗಿ ಅಮೂಲ್ಯವಾದ ಬೆಟ್ಟದ ಕಲ್ಲುಗಳನ್ನು ಒಡೆದು ಹಾಕಲಾಗುತ್ತಿದೆ. ಈ ಕುರಿತು ಸ್ಥಳೀಯರು ಮತ್ತು ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದರೂ ಕಾಮಗಾರಿಯನ್ನು ಗುತ್ತಿಗೆ ಪಡೆದವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕೂಡಲೇ ಜಲಸಂಪನ್ಮೂಲ ಇಲಾಖೆ ಮತ್ತು ಜಿಲ್ಲಾಡಳಿತ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಅನಾಹುತವನ್ನು ತಪ್ಪಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next