Advertisement

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

09:04 PM Nov 26, 2024 | Team Udayavani |

ಪ್ರಯಾಗ್‌ರಾಜ್‌: ಅಗ್ನಿ ಅವಘಡಗಳು ಸಂಭವಿಸಿದಾಗ ಅಗ್ನಿಶಾಮಕ ದಳದ ಬದಲು ರೊಬೋಟ್‌ಗಳೇ ಧಾವಿಸಿ ಬೆಂಕಿ ನಂದಿಸಿದರೆ ಹೇಗಿರುತ್ತದೆ?

Advertisement

ಹೌದು, ಮುಂದಿನ ವರ್ಷ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾ ಕುಂಭ ಮೇಳದಲ್ಲಿ ಅಗ್ನಿ ಅವಘಡ ತಡೆಗೆ ಇಂತಹ ರೊಬೋಟ್‌ಗಳನ್ನು ನಿಯೋಜಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಬೆಂಕಿ ನಂದಿಸಲು ರೋಬೋ ಬಳಕೆ ಮಾಡಲಾಗುತ್ತಿದೆ ಎಂದು ಉತ್ತರ ಪ್ರದೇಶ ಅಗ್ನಿಶಾಮಕ ಸೇವೆಗಳ ಹೆಚ್ಚುವರಿ ನಿರ್ದೇಶಕ ಪದ್ಮಜಾ ಚೌಹಾಣ್‌ ಹೇಳಿದ್ದಾರೆ.

ಉದ್ದೇಶಿತ ರೊಬೋಟ್‌ಗಳು 20ರಿಂದ 25 ಕೆ.ಜಿ. ತೂಕವನ್ನು ಹೊಂದಿವೆ. ಅವುಗಳು ಅಗ್ನಿಶಾಮಕ ಸಿಬಂದಿ ತೆರಳಲು ಸಾಧ್ಯವಾಗದ ಸೂಕ್ಷ್ಮ ಸ್ಥಳಗಳಿಗೆ ತೆರಳಿ ಬೆಂಕಿಯನ್ನು ತಹಬದಿಗೆ ತರಲು ನೆರವಾಗಲಿವೆ. ಅತ್ಯಂತ ವೇಗವಾಗಿ ಮೆಟ್ಟಿಲುಗಳನ್ನು ಏರಿ ನಿಗದಿತ ಅವಧಿಯಲ್ಲಿ ಬೆಂಕಿಯನ್ನು ನಂದಿಸುವ ಚಾಕಚಕ್ಯತೆಯನ್ನು ಈ ಆಗ್ನಿಶಾಮಕ ರೊಬೋಟ್‌ಗಳು ಹೊಂದಿವೆ. ಜತೆಗೆ ಹೈಟೆಕ್‌ ಕೆಮರಾ ಹೊಂದಿದ್ದು, 35 ಮೀ. ಎತ್ತರದಿಂದ ಬೆಂಕಿಯನ್ನು ನಂದಿಸುವ ಸಾಮರ್ಥ್ಯವಿದೆ ಎಂದು ಚೌಹಾಣ್‌ ಹೇಳಿದ್ದಾರೆ. ಇವುಗಳನ್ನು ಬೇಕಾದ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಕಾರ್ಯಾಚರಣೆ ನಡೆಸಲು ಸುಲಭ ಎಂದರು.

ಇದಲ್ಲದೆ ಕುಂಭಮೇಳಕ್ಕೆಂದೇ 200 ಮಂದಿ ಅಗ್ನಿಶಾಮಕ ಕಮಾಂಡೋಗಳಿಗೆ ಎನ್‌ಡಿಆರ್‌ಎಫ್ ಮತ್ತು ಸಿಐಎಸ್‌ಎಫ್ ತರಬೇತಿಯನ್ನು ನೀಡಲಾಗಿದೆ. 67 ಕೋಟಿ ರೂ. ಅನುದಾನ ನೀಡಲಾಗಿದ್ದು, ಕಳೆದ ಕುಂಭ ಮೇಳದ ವೇಳೆ ಅಗ್ನಿ ಸುರಕ್ಷೆಗಾಗಿ ಕೇವಲ 6 ಕೋಟಿ ರೂ. ನಿಗದಿಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next