Advertisement

ಚೆಸ್‌ ಆಟದ ವೇಳೆ ಬಾಲಕನ ಬೆರಳುಗಳನ್ನು ಮುರಿದ ರೋಬೋಟ್‌

11:32 AM Jul 26, 2022 | Team Udayavani |

ಮಾಸ್ಕೋ: ಇತ್ತೀಚೆಗೆ  ನಡೆದ ಮಾಸ್ಕೋ ಚೆಸ್ ಓಪನ್ ಪಂದ್ಯಾವಳಿಯಲ್ಲಿ ಚೆಸ್ ಆಡುತ್ತಿದ್ದ ರೋಬೋಟ್, ತನ್ನ ಎದುರಾಳಿ 7 ವರ್ಷದ ಮಗುವಿನ ಬೆರಳನ್ನು ಮುರಿದಿರುವ ವಿಲಕ್ಷಣ ಘಟನೆ ನಡೆದಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿದೆ.

Advertisement

ಈ ಹಿಂದೆ ರೋಬೋಟ್ ಹಲವು ಪಂದ್ಯಾವಳಿಗಳನ್ನು ಆಡಿದೆ. ಯಾವುದೇ ಅವಘಡಗಳು ಸಂಭವಿಸಿಲ್ಲ. ಆದರೆ  7 ವರ್ಷದ ಮಗುವಿನ ಬೆರಳನ್ನು ಮುರಿದಿರುಗುವ ಘಟನೆ ಕೆಟ್ಟ ಬೆಳವಣಿಗೆಯಾಗಿದೆ” ಎಂದು ಮಾಸ್ಕೋ ಚೆಸ್ ಫೆಡರೇಶನ್ ಅಧ್ಯಕ್ಷ ಸೆರ್ಗೆಯ್ ಲಾಜರೆವ್ ತಿಳಿಸಿದ್ದಾರೆ.

ಚೆಸ್‌ ಪಂದ್ಯಾವಳಿಯ ವೇಳೆ ರೋಬೋಟ್‌ ನ ಕಾರ್ಯ ನಿರ್ವಹಣೆಗೆ ನಿರ್ದಿಷ್ಟ ಅವಧಿಯನ್ನು ನೀಡಲಾಗುತ್ತದೆ. ಆದರೆ ಈ ಪಂದ್ಯಾವಳಿಯಲ್ಲಿ ನಿರ್ದಿಷ್ಟ ಸಮಯವನ್ನು ನಿಗದಿ ಪಡಿಸಿರಲಿಲ್ಲ. ಹಾಗಾಗಿ ಸ್ಪರ್ಧಿಯು ರೋಬೋಟ್‌ ಪ್ರತಿಕ್ರಿಯೆಗೆ ಕಾಯದೇ ಆಡಲು ಮಂದಾಗಿದ್ದಾನೆ. ಈ ವೇಳೆ ರೋಬೋಟ್‌ ಬಾಲಕನ ಬೆರಳುಗಳನ್ನು ಮುರಿದಿದೆ. ಈ ಕುರಿತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಆಯೋಜಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಪಬ್ ನಲ್ಲಿ ವಿದ್ಯಾರ್ಥಿಗಳ ಫೇರ್ ವೆಲ್ ಪಾರ್ಟಿ; ಸಂಘಟನೆ ಕಾರ್ಯಕರ್ತರಿಂದ ದಾಳಿ

ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದ್ದು, ರೋಬೋಟ್‌ ತನ್ನ ಎದುರಾಳಿಯ ಬೆರಳುಗಳನ್ನು ಮುರಿಯುವ ದೃಶ್ಯ ಸೆರೆಯಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next