ಉಡುಪಿ : ಮನೆಗೆ ಹಾಕಿದ್ದ ಚಿಲಕ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. 76 ಬಡಗಬೆಟ್ಟುವಿನ ಶಹಜಾನ್ ಖಾಝಿ ಅವರು ಡಿ. 24ರಂದು ಮುಂಬಯಿಗೆ ತೆರಳಿದ್ದರು. ಅವರ ಮನೆಯಲ್ಲಿ ಸಿಸಿ ಟಿವಿ ಅಳವಡಿಸಿದ್ದು, ಜ. 15ರಂದು ಸಿಸಿ ಟಿವಿ ಕಾರ್ಯನಿರ್ವಹಿಸದೇ ಇದ್ದುದರಿಂದ ನೆರೆಮನೆಯ ಭಾಸ್ಕರ ಅವರಿಗೆ ಮನೆಯನ್ನು ನೋಡಿ ಬರುವಂತೆ ತಿಳಿಸಿದ್ದರು.
Advertisement
ಈ ವೇಳೆ ಮನೆಯ ಮುಂದಿನ ಬಾಗಿಲಿನ ಚಿಲಕ ಮುರಿದಿತ್ತು. ಬಂದು ನೋಡಿದಾಗ ಮನೆಯ ಎದುರಿನ ಬಾಗಿಲಿನ ಚಿಲಕವನ್ನು ಮುರಿದಿರುವುದು ಕಂಡುಬಂದಿದ್ದು, ಯಾರೋ ಕಳ್ಳರು ದಿನಾಂಕ ಜ. 15ರಿಂದ 16ರ ನಡುವೆ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.