Advertisement

ED ಕಚೇರಿಗೆ ವಾದ್ರಾಗೆ ಕಾರಿನಲ್ಲಿ ಡ್ರಾಪ್‌ ಕೊಟ್ಟ ಪ್ರಿಯಾಂಕಾ ಗಾಂಧಿ

12:19 PM Feb 06, 2019 | udayavani editorial |

ಹೊಸದಿಲ್ಲಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾವ, ಸೋನಿಯಾ ಗಾಂಧಿ ಅಳಿಯ, ಉದ್ಯಮಿ ರಾಬರ್ಟ್‌ ವಾದ್ರಾ ಅವರಿಗೆ ಇಂದು ಮಧ್ಯಾಹ್ನ 3.47ರ ಸುಮಾರಿಗೆ ಜಾರಿ ನಿರ್ದೇಶನಾಲಯದ (ED) ಮುಂದೆ ತನಿಖೆಗೆ ಹಾಜರಾಗಲು ಪತ್ನಿ ಪ್ರಿಯಾಂಕಾ ಗಾಂಧಿ ತಮ್ಮ ಬಿಳಿ ಬಣ್ಣದ ಟೊಯೋಟಾ ಲ್ಯಾಂಡ್‌ ಕ್ರೂಯಿಸರ್‌ ಕಾರಿನಲ್ಲಿ ಡ್ರಾಪ್‌ ಕೊಟ್ಟರು. 

Advertisement

ಪ್ರಿಯಾಂಕಾ ಕಾರಿಗೆ ಬೆಂಗಾವಲಾಗಿ ಎಸ್‌ಪಿಜಿ ಸಿಬಂದಿಗಳು ಇನ್ನೊಂದು ವಾಹನದಲ್ಲಿ ಇದ್ದರು. ED ಕಾರ್ಯಾಲಯವಿರುವ ಮಧ್ಯ ದಿಲ್ಲಿಯ ಜಾಮ್‌ ನಗರ್‌ ಹೌಸ್‌ ಗೆ ಪ್ರಿಯಾಂಕಾ, ಪತಿ ವಾದ್ರಾಗೆ ಡ್ರಾಪ್‌ ಕೊಟ್ಟು ಒಡನೆಯೇ ತಮ್ಮ ಬೆಂಗಾವಲಿನ ವಾಹನಗಳ ಸಾಲಿನಲ್ಲಿ ಮರಳಿದರು. 

ವಾದ್ರಾ ಅವರು ತನಿಖಾ ಸಂಸ್ಥೆಯಾಗಿರುವ ಜಾರಿ ನಿರ್ದೇಶನಾಲಯದ ಮುಂದೆ ಇದೇ ಮೊದಲ ಬಾರಿಗೆ ಹಾಜರಾಗುತ್ತಿದ್ದಾರೆ. 

ಕಳೆದ ವಾರ ವಾದ್ರಾ ಅವರು ಸಂಭಾವ್ಯ ಬಂಧನದಿಂದ ಪಾರಾಗಲು ನಿರೀಕ್ಷಣಾ ಜಾಮೀನು ಕೋರಿ ದಿಲ್ಲಿ ಕೋರ್ಟ್‌ ಗೆ ಅರ್ಜಿ ಹಾಕಿದ್ದರು. ಇಡಿ ಮುಂದೆ ತನಿಖೆಗೆ  ಹಾಜರಾಗಿ ಸಹಕರಿಸಬೇಕೆಂಬ ಶರತ್ತಿನಲ್ಲಿ ಕೋರ್ಟ್‌ ವಾದ್ರಾ ಗೆ ಫೆ.16ರ ವರೆಗೆ ಬಂಧನದಿಂದ ರಕ್ಷಣೆ ನೀಡಿತ್ತು. 

ವಾದ್ರಾ ಅವರು ಬ್ರಿಟನ್‌ ನಲ್ಲಿ ಹಲವಾರು ಆಸ್ತಿಪಾಸ್ತಿ ಖರೀದಿಸಿರುವಲ್ಲಿ ನಡೆಸಿರುವರೆನ್ನಲಾದ ಹಣಕಾಸು ಅಕ್ರಮಗಳ ಬಗ್ಗೆ ಜಾರಿ ನಿರ್ದೇಶನಾಲಯ ವಾದ್ರಾ ವಿರುದ್ಧ ತನಿಖೆ ಕೈಗೊಂಡಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next