Advertisement

ಭೂ ಹಗರಣ: ಪ್ರಿಯಾಂಕಾ ಜತೆ ಜೈಪುರದಲ್ಲಿ ED ತನಿಖೆಗೆ ಹಾಜರಾದ ವಾದ್ರಾ

06:47 AM Feb 12, 2019 | udayavani editorial |

ಜೈಪುರ : ರಾಜಸ್ಥಾನದ ಗಡಿ ಜಿಲ್ಲೆಯಾಗಿರುವ ಬಿಕಾನೇರ್‌ ನಲ್ಲಿ ಭೂ ಕಬಳಿಕೆ ಹಗರಣದ ಬಗೆಗಿನ ಜಾರಿ ನಿರ್ದೇಶನಾಲಯದ ತನಿಖೆಯನ್ನು ಎದುರಿಸಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾವ ರಾಬರ್ಟ್‌ ವಾದ್ರಾ ಅವರಿಂದು ಜೈಪುರದಲ್ಲಿನ ED ವಲಯ ಕಾರ್ಯಾಲಯಕ್ಕೆ ಆಗಮಿಸಿದರು. 

Advertisement

ಎಐಸಿಸಿ  ಪ್ರಧಾನ ಕಾರ್ಯದರ್ಶಿಯಾಗಿರುವ ಪತ್ನಿ ಪ್ರಿಯಾಂಕಾ ಗಾಂಧಿ ಅವರು ರಾಬರ್ಟ್‌ ವಾದ್ರಾ ಜತೆ ED ಕಾರ್ಯಾಲಯದ ವರೆಗೆ ಆಗಮಿಸಿದರು. 

ಜಾರಿ ನಿರ್ದೇಶನಾಲಯದ ಎದುರು ವಾದ್ರಾ ತನಿಖೆಗೆ ಹಾಜರಾಗುತ್ತಿರುವುದು ನಾಲ್ಕನೇ ಬಾರಿ ಮತ್ತು ಜೈಪುರದಲ್ಲಿ ಮೊದಲನೇ ಬಾರಿ ಯಾಗಿದೆ. 

ಭೂ ಕಬಳಿಕೆ ಹಗರಣದ ತನಿಖೆ ಸಂಬಂಧ ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಕೂಡದೆಂದು ವಿನಂತಿಸಿಕೊಂಡದ್ದನ್ನು ಪರಿಗಣಿಸಿದ್ದ ರಾಜಸ್ಥಾನ ಹೈಕೋರ್ಟ್‌, ಜೈಪುರದಲ್ಲಿನ ED ಕಾರ್ಯಾಲಯದಲ್ಲಿ ತನಿಖೆಗೆ ಹಾಜರಾಗಿ ಸಹಕರಿಸುವಂತೆ ರಾಬರ್ಟ್‌ ವಾದ್ರಾ ಮತ್ತು ಆತನ ತಾಯಿಗೆ ಸೂಚಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next