Advertisement

“ರಾಬರ್ಟ್‌’ಹಾಡು ಆನಂದ್‌ ಆಡಿಯೋ ಪಾಲು

09:46 AM Oct 01, 2019 | Lakshmi GovindaRaju |

ದರ್ಶನ್‌ ಸದ್ಯಕ್ಕೆ ಕೀನ್ಯಾ ಕಾಡಲ್ಲಿ ಓಡಾಡುತ್ತಿದ್ದಾರೆ. ಅದು ಹಳೆಯ ಸುದ್ದಿ. ಈಗ ಹೊಸ ಸುದ್ದಿಯೆಂದರೆ, ಅವರ ಅಭಿನಯದ “ರಾಬರ್ಟ್‌’ ಚಿತ್ರದ್ದು. ಹೌದು, ಈಗಾಗಲೇ ಒಂದಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಸದ್ಯ ಬ್ರೇಕ್‌ನಲ್ಲಿದೆ. ಇನ್ನೂ ಚಿತ್ರೀಕರಣದಲ್ಲಿರುವಾಗಲೇ ಚಿತ್ರದ ಹಾಡುಗಳ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಆನಂದ್‌ ಆಡಿಯೋ ಸಂಸ್ಥೆ “ರಾಬರ್ಟ್‌’ ಚಿತ್ರದ ಆಡಿಯೋ ರೈಟ್ಸ್‌ ಪಡೆದುಕೊಂಡಿದ್ದು, ಅದೊಂದು ದಾಖಲೆಯ ಮೊತ್ತಕ್ಕೆ ಪಡೆದಿದೆ ಎನ್ನಲಾಗಿದೆ.

Advertisement

ತರುಣ್‌ ಸುಧೀರ್‌ ನಿರ್ದೇಶನದ “ರಾಬರ್ಟ್‌’ ಚಿತ್ರದ ಬಗ್ಗೆ ಎಷ್ಟೊಂದು ನಿರೀಕ್ಷೆ ಇದೆಯೋ, ಅಷ್ಟೇ ನಿರೀಕ್ಷೆ ಚಿತ್ರದ ಹಾಡುಗಳ ಮೇಲೆಯೂ ಇದೆ. “ರಾಬರ್ಟ್‌’ ಆಡಿಯೋ ರೈಟ್ಸ್‌ ಪಡೆಯಲು ಒಂದಷ್ಟು ಆಡಿಯೋ ಕಂಪೆನಿಗಳ ನಡುವಿನ ಪೈಪೋಟಿ ಜೋರಾಗಿಯೇ ನಡೆದಿತ್ತು. ಆದರೆ, ಅದೀಗ ಆನಂದ್‌ ಆಡಿಯೋ ಪಾಲಾಗಿದೆ. ಅರ್ಜುನ್‌ ಜನ್ಯ ಸಂಗೀತವಿರುವ “ರಾಬರ್ಟ್‌’ ಚಿತ್ರದ ಹಾಡುಗಳು ಇನ್ನೇನು ಹೊರಬರಲು ತಯಾರಿ ನಡೆಯುತ್ತಿದೆ.

ಸದ್ಯಕ್ಕೆ “ರಾಬರ್ಟ್‌’ ಚಿತ್ರೀಕರಣ ಶುರುಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಅಕ್ಟೋಬರ್‌ ಮೊದಲ ವಾರದಿಂದ ಪುನಃ ಶೂಟಿಂಗ್‌ ನಡೆಸಲು ಮುಂದಾಗುತ್ತಿದೆ. ದರ್ಶನ್‌ ಅವರೊಂದಿಗೆ ಈ ಚಿತ್ರದಲ್ಲಿ ನಾಯಕಿಯಾಗಿ ಆಶಾ ಭಟ್‌ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್‌ ಅಂಗಳದಲ್ಲಿ ಕಾಣಿಸಿಕೊಂಡಿದ್ದ, ಆಶಾಭಟ್‌, ಕನ್ನಡದ ಹುಡುಗಿ. ಇದೇ ಮೊದಲ ಸಲ “ರಾಬರ್ಟ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next