ಚಿತ್ರಮಂದಿರಗಳು ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನಿಮಾಗಳ ಪ್ರದರ್ಶನಕ್ಕೆಅನುಮತಿ ನೀಡಿದ ಬಳಿಕ ನಿಧಾನವಾಗಿ ಒಂದರ ಹಿಂದೊಂದು ಹೊಸಬರ ಚಿತ್ರಗಳು ಬಿಡುಗಡೆಯಾಗಿ ತೆರೆಗೆ ಬರುತ್ತಿವೆ. ನಿಧಾನವಾಗಿಪ್ರೇಕ್ಷಕರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ.ಆದರೆ ಸಿನಿಪ್ರಿಯರುಮತ್ತು ಚಿತ್ರರಂಗದ ಚಿತ್ತಮಾತ್ರ ಮುಂದೆ ಬಿಡುಗಡೆಯಾಗಲಿರುವ ಬಿಗ್‌ಬಜೆಟ್ ಮತ್ತು ಬಿಗ್ ಸ್ಟಾರ್ ಸಿನಿಮಾಗಳತ್ತ ನೆಟ್ಟಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.
ಅದರಲ್ಲೂಈ ವರ್ಷದ ಆರಂಭದಲ್ಲಿಯೇ ಬಿಡುಗಡೆಯಾಗಬೇಕಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್’ಚಿತ್ರದ ಮೇಲೆ ಸಹಜವಾಗಿಯೇ ನಿರೀಕ್ಷೆಹೆಚ್ಚಾಗಿಯೇ ಇದೆ. ಕೊರೊನಾಲಾಕ್ ಡೌನ್‌ನಿಂದಾಗಿ ಅನಿರ್ಧಿಷ್ಟ ಅವಧಿಗೆ ಬಿಡುಗಡೆಯನ್ನು ಮುಂದೂಡಿರುವ “ರಾಬರ್ಟ್’ಚಿತ್ರಮತ್ತೆಯಾವಾಗ ತೆರೆಗೆ ಬರಬಹುದುಎಂಬ ಪ್ರಶ್ನೆ ಸದ್ಯಕ್ಕೆಪ್ರೇಕ್ಷಕರು ಮತ್ತು ಸಿನಿಮಾ ಮಂದಿಯ ಮುಂದಿದೆ.ಆದರೆ ಇದಕ್ಕೆ ಉತ್ತರ ಏಪ್ರಿಲ್2 ಎನ್ನುತ್ತಿವೆ ಚಿತ್ರರಂಗದ ಮೂಲಗಳು.
ಹೌದು, ಸದ್ಯ ಕೊರೊನಾಕ್ಕೆ ಲಸಿಕೆ ಸಿದ್ಧವಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ.ಎಲ್ಲಅಂದುಕೊಂಡಂತೆ ನಡೆದರೆ,ಹೊಸವರ್ಷದ ಆರಂಭದಲ್ಲಿ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ. ಮತ್ತೂಂದೆಡೆ, ಕೊರೊನಾ ಪ್ರಕರಣಗಳು ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದರಿಂದ, ವ್ಯಾಪಾರ- ವಹಿವಾಟುಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಸರ್ಕಾರ ಕೂಡ ಹಂತಹಂತವಾಗಿ ಲಾಕ್‌ಡೌನ್ ನಿಯಮಗಳನ್ನು ಸಡಿಲಿಸುತ್ತಿರುವುದರಿಂದ, ಮುಂಬರುವ ಮಾರ್ಚ್ ವೇಳೆಗೆಎಲ್ಲವೂ ಮೊದಲಿನಂತಾಗಬಹುದು ಎನ್ನುವುದು ಅನೇಕರ ಅಂದಾಜು.
ಇದನ್ನೂ ಓದಿ:ಕಬ್ಬಿಣಾಂಶ ಕೊರತೆ: ನಿರ್ಲಕ್ಷ್ಯ ಬೇಡ…ಇದಕ್ಕೇನು ಪರಿಹಾರ?
ಹಾಗೇನಾದರೂ, ಆದರೆಏಪ್ರಿಲ್‌ನಲ್ಲಿ ಥಿಯೇಟರ್‌ಮತ್ತುಮಲ್ಟಿಫ್ಲೆಕ್ಸ್‌ಗಳಿಗೆ ಈಗಾಗಲೇ ಅನ್ವಯವಾಗುತ್ತಿರುವ ಷರತ್ತುಬದ್ಧಪ್ರವೇಶಾತಿ ನಿಯಮಗಳು ಕೊನೆಯಾಗಲಿವೆ. ಮೊದಲಿನಂತೆ ಥಿಯೇಟರ್ ಮತ್ತು ಮಲ್ಟಿಫ್ಲೆಕ್ಸ್‌ಗಳ ಮುಂದೆ ಪ್ರೇಕ್ಷಕರ ಜಮಾವಣೆ ಆಗಬಹುದು ಎನ್ನುವುದು ಗಾಂಧಿನಗರದ ಲೆಕ್ಕಾಚಾರ. ಈ ಲೆಕ್ಕಾಚಾರದ ಪ್ರಕಾರ ಎಲ್ಲವೂ ನಡೆದರೆ, ಏಪ್ರಿಲ್ ಮೊದಲವಾರ “ರಾಬರ್ಟ್’ಬಿಡುಗಡೆ ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.
“ರಾಬರ್ಟ್’ ಚಿತ್ರತಂಡ ಕೂಡ ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟುಗಳಭರ್ತಿಗೆ ಅವಕಾಶ ನೀಡಿದ ನಂತರವಷ್ಟೇ ಚಿತ್ರದ ಬಿಡುಗಡೆ ಎಂದು ಈಗಾಗಲೇ ಘೋಷಿಸಿರುವುದರಿಂದ, ಏಪ್ರಿಲ್ 2 ರಂದೇ”ರಾಬರ್ಟ್’ ತೆರೆಗೆಬರಬಹುದು ಎನ್ನಲಾಗುತ್ತಿದೆ.ಆದರೆ ಈಬಗ್ಗೆ ಸದ್ಯಕ್ಕೆ ಚಿತ್ರತಂಡ ಗುಟ್ಟುಬಿಟ್ಟು ಕೊಡದಿರುವುದರಿಂದ, “ರಾಬರ್ಟ್’ ಬಿಡುಗಡೆಯ ಬಗ್ಗೆ ಒಂದಷ್ಟುಅಂತೆ-ಕಂತೆಗಳು ಹರಿದಾಡುತ್ತಲೇ ಇದೆ.