Advertisement

ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ 2.73 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

08:08 PM May 15, 2024 | Team Udayavani |

ಪಣಜಿ: ಗೋವಾದ ನೇವ್ರಾದಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯನ್ನು ದಾರಿಯಲ್ಲಿ ತಡೆದ ಇಬ್ಬರು ಅಪರಿಚಿತರು 2.73 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಈ ಪ್ರಕರಣದಲ್ಲಿ ಅಗಶಿ ಪೊಲೀಸರು ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Advertisement

ಅಗಶಿ ಪೊಲೀಸರು ನೀಡಿದ ಮಾಹಿತಿ ಪ್ರಕಾರ ಮಹಿಳೆ ಸೀತಾ ನಾಯ್ಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ. ಅದರಂತೆ ಮೇ 12ರಂದು ಬೆಳಗ್ಗೆ 9.20ರ ನಡುವೆ ಸಾತೇರಿ ದೇವಸ್ಥಾನಕ್ಕೆ ಹೋಗಿದ್ದಳು. ಆ ವೇಳೆ ದಾರಿಯಲ್ಲಿ ಇಬ್ಬರು ಬೈಕ್ ಸವಾರರು ಆಕೆಯನ್ನು ತಡೆದು ಅಲ್ಲಿಗೆ ಹೋಗುವುದು ಸುರಕ್ಷಿತವಲ್ಲ ಎಂದು ಹೇಳಿದ್ದರು. ಪೊಲೀಸ್ ಕಾರು ಹಿಂದೆ ಬರುತ್ತದೆ ಎಂದು ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನೂ ತೆಗೆದಿದ್ದಾನೆ. ಆಗ ಕಿರುಚಿಕೊಂಡು ಕೈಯಲ್ಲಿದ್ದ ಚಿನ್ನದ ಸರ ಕೊಟ್ಟಿದ್ದಾಳೆ. ಅವಳ ಕೈಯಿಂದ ಬಳೆಗಳನ್ನು ತೆಗೆದು ಇಬ್ಬರೂ ಒಡವೆಗಳನ್ನೆಲ್ಲ ಪೇಪರ್ ನಲ್ಲಿ ಹಾಕಿ ಅವಳ ಕೈಗೆ ಕೊಟ್ಟು ಬೈಕ್ ನಲ್ಲಿ ಹೊರಟರು. ಬಳಿಕ ಪೇಪರ್ ತೆರೆದಾಗ ಪೇಪರ್ ನಲ್ಲಿ ಏನೂ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ನಡುವೆ ಆಕೆ ಅಗಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

2.73 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಎರಡು ಬಳೆಗಳನ್ನು ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಇದನ್ನು ಅರಿತು ಅಗಶಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸ್ವಪ್ನಿಲ್ ನಾಯಕ್ ಅವರು ಅಪರಿಚಿತ ಬೈಕ್ ಸವಾರನ ವಿರುದ್ಧ ಐಪಿಸಿ ಸೆಕ್ಷನ್ 392 ಮತ್ತು 420 ಮತ್ತು ಇತರ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ನೆವ್ರಾ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆಯೊಂದಿಗೆ ಆ ಪ್ರದೇಶದಲ್ಲಿ ಶಂಕಿತರ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ :Lack of Water: ನೀರಿನ ಅಭಾವ… ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಜೆ

Advertisement

Udayavani is now on Telegram. Click here to join our channel and stay updated with the latest news.

Next