Advertisement

ಮೋಜಿನ ಜೀವನಕ್ಕಾಗಿ ಮನೆ ಕಳವು;  ಮೂವರು ದರೋಡೆಕೋರರ ಬಂಧನ

02:56 PM Feb 25, 2022 | Team Udayavani |

ಬೆಂಗಳೂರು: ಮೋಜಿನ ಜೀವನಕ್ಕಾಗಿ ಮನೆ ಕಳವು ಮತ್ತು ಕಾರುಗಳ ಗಾಜು ಹೊಡೆದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಚಂದ್ರ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಚಿತ್ತೂರು ಜಿಲ್ಲೆಯ ಶಾಂತಿಪುರದ ಸತೀಶ್‌ ಅಲಿ ಯಾಸ್‌ ಸತ್ಯ(24) ಬಂಧಿತ. ಆರೋಪಿಯಿಂದ 8.24 ಲಕ್ಷ ಮೌಲ್ಯದ ರೂ. ಮೌಲ್ಯದ 206 ಗ್ರಾಂ ಚಿನ್ನಾಭರಣ, 47,500 ನಗದು ವಶಪಡಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ಇತ್ತೀಚೆಗೆ ಚಂದ್ರಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು 50 ಸಾವಿರ ರೂ. ನಗದು ಹಾಗೂ ಒಂದು ವಾಚ್‌ ಕಳ್ಳತನ ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನನ್ವಯ ಕಾರ್ಯಾ ಚರಣೆ ನಡೆಸಿದ ಪೊಲೀಸರು ಆರೋಪಿ ಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಯ ಬಂಧನದಿಂದ ಅನ್ನ ಪೂಣೇಶ್ವರಿ ನಗರ, ಜ್ಞಾನ ಭಾರತಿ ನಗರ ಮತ್ತು ಚಂದ್ರಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 3 ಮನೆಗಳವು ಸೇರಿದಂತೆ ಒಟ್ಟು 4 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ಮೆಜೆಸ್ಟಿಕ್‌ನಲ್ಲಿರುವ ತಿರುಪತಿ ಲಾಡ್ಜ್ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಸಂಬಳ ಬರುತ್ತಿ ದ್ದಂತೆ ಚೆನ್ನೈಗೆ ತೆರಳಿ ಮೋಜಿನ ಜೀವನ ನಡೆಸುತ್ತಿ ದ್ದ. ಹಣ ಖಾಲಿಯಾಗುತ್ತಿದ್ದಂತೆ ನಗರಕ್ಕೆ ಬಂದು ಬೀಗ ಹಾಕಿದ ಮನೆಗಳು ಹಾಗೂ ನಿಲ್ಲಿಸಿದ ಕಾರುಗಳ ಗಾಜುಗಳನ್ನು ಹೊಡೆದು ಅದರಲ್ಲಿದ್ದ ನಗದು, ಮೌಲ್ಯಯುತ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ ಎಂದು ಪೊಲೀಸರು ಹೇಳಿದರು.

ಮೂವರು ದರೋಡೆಕೋರರ ಬಂಧನ

Advertisement

ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾರಕಾಸ್ತ್ರ ತೋರಿಸಿ ದರೋಡೆಗೆ ಸಿದ್ಧತೆ ನಡೆಸಿದ್ದ ಯಲಹಂಕ ಪೊಲೀಸ್‌ ಠಾಣೆಯ ರೌಡಿಶೀಟರ್‌ ಸೇರಿ ಮೂವರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಯಲಹಂಕ, ಡಿ.ಜೆ.ಹಳ್ಳಿ ಠಾಣೆಗಳ ರೌಡಿಶೀಟರ್‌ ವಾಸೀಂ, ನಜೀಮ್‌ ಹಾಗೂ ಮೋಹಿಸಿನ್‌ ಬಂಧಿತರು.

ಆರೋಪಿಗಳಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿಗಳು ಬುಧವಾರ ಸಂಜೆ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಶಾಂಪುರ ಮುಖ್ಯ ರಸ್ತೆಯ ಕನಕನಗರದ ಕಡೆ ಹೋಗುವ ರಸ್ತೆಯ ರೈಲ್ವೆ ಹಳಿ ಹತ್ತಿರ ಮಾರಕಾಸ್ತ್ರಗಳನ್ನು ಹಿಡಿದು ದರೋಡೆ ಹೊಂಚು ಹಾಕಿದ್ದರು. ಈ ಮಾರ್ಗದಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ದರೋಡೆಗೆ ಸಿದ್ಧತೆ ನಡೆಸಿದ್ದರು. ಈ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ತಿಳಿಸಿದೆ

ರೌಡಿಶೀಟರ್‌ ವಾಸೀಂ ವಿರುದ್ಧ 2014ರಲ್ಲಿ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಮತ್ತೂಬ್ಬ ರೌಡಿಶೀಟರ್‌ ನಜೀಮ್‌ ವಿರುದ್ಧ ಡಿ.ಜೆ. ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ತಿಳಿಸಿದೆ.

ಗೂಂಡಾ ಕಾಯ್ದೆಯಡಿ ರೌಡಿಶೀಟರ್‌ ಬಂಧನ 

ನಿರಂತರವಾಗಿ ಅಪರಾಧ ಪ್ರಕರಣಗಳಲ್ಲಿ ತೊಡಗಿ ಕಾನೂನು ಸುವ್ಯವಸ್ಥೆಗೆ ತೊಡಕಾಗಿದ್ದ ರೌಡಿಶೀಟರ್‌ ವೆಂಕಟೇಶ್‌(28) ಅಲಿಯಾಸ್‌ ಒಂಟಿ ಕೈ ವೆಂಕಟೇಶ್‌ ವಿರುದ್ಧ ಗೂಂಡಾ ಕಾಯ್ದೆ ಡಿ ಬಂಧಿಸಲಾಗಿದೆ.

ವೆಂಕಟೇಶ್‌ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 1 ಕೊಲೆ, ನಾಲ್ಕು ಕೊಲೆ ಯತ್ನ, ಹಲ್ಲೆ, ಜೀವ ಬೆದರಿಕೆ, ಒಂದು ಡಕಾಯಿತಿ ಯತ್ನ, ಡ್ರಗ್ಸ್‌ ಸಾಗಾಟ ಹಾಗೂ ಮಾರಾಟ ಸೇರಿ ವಿವಿಧ ಪ್ರಕರಣಗಳು ದಾಖಲಿಸಲಾಗಿದೆ. ಹೀಗಾಗಿ ವೆಂಕಟೇಶನ ವಿರುದ್ಧ 2022 ಜ. 9ರಿಂದ ಒಂದು ವರ್ಷದವರೆಗೆ ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ.

ಆರೋಪಿಯೂ ಸಾರ್ವಜನಿಕ ಶಾಂತಿ ಭಂಗಗೊಳಿಸಿದ್ದಲ್ಲದೇ, ಕಾನೂನು ಬಾಹಿರವಾದ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಈತನ ವಿರುದ್ಧ ಸಾರ್ವಜನಿಕರು ದೂರು ನೀಡಲು ಹೆದರುತ್ತಿದ್ದರು. ಇನ್ನು ಸಾಕ್ಷ್ಯಗಳಿಗೆ ಬೆದರಿಕೆ ಹಾಕುತ್ತಿದ್ದ. ಸಾರ್ವಜನಿಕರ ಆಸ್ತಿ-ಪಾಸ್ತಿ ನಾಶ ತಡೆಯಲು ಗೂಂಡಾ ಕಾಯ್ದೆ ಅಡಿ ಜಾರಿಗೊಳಿಸಿ ಒಂದು ವರ್ಷ ಬಂಧನದಲ್ಲಿಡಲು ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next