ಧಾರವಾಡ: ದಿನವಿಡಿ ಕುಡಿಯುವ ನೀರು ಯೋಜನೆ ಅಡಿಯಲ್ಲಿ ಅಳವಡಿಸಲಾದ ಹಿತ್ತಾಳೆ ನಳ, ವಾಲ್Ìಗಳನ್ನು ಹೊತ್ತೂಯ್ದು, ಪೈಪ್ ಸಡಿಲಗೊಳಿಸಿದ ಹಾಗೂ ಮೀಟರ್ ಧ್ವಂಸಗೊಳಿಸುವ ಭರದಲ್ಲಿ ಮೇಲಿನ ಮುಚ್ಚಳ ರಾತ್ರೋರಾತ್ರಿ ಮುರಿಯುತ್ತಿರುವ ಘಟನೆಗಳು 2-3 ದಿನಗಳಿಂದ ಮಂಜುನಾಥಪುರದಲ್ಲಿ ನಡೆಯುತ್ತಿವೆ.
ಈ ಘಟನೆಗಳು ಮಂಜುನಾಥಪುರ ನಿವಾಸಿಗಳ ನಿದ್ದೆ ಗೆಡಿಸಿದೆ. ಇಲ್ಲಿನ ಪ್ರಥಮ ಹಾಗೂ ದ್ವಿತೀಯ ಅಡ್ಡ ರಸ್ತೆಗಳಲ್ಲಿರುವ ಮನೆಗಳಿಗೆ ಇತ್ತೀಚೆಗೆ ಹೊಸದಾಗಿ ಅಳವಡಿಸಲಾಗಿದ್ದ ಪರಿಕರಗಳನ್ನು ರವಿವಾರ ಹಾಗೂ ಸೋಮವಾರ ಬೆಳಗಿನ ಜಾವ 2:30ರಿಂದ 4:30 ಗಂಟೆಯ ಅವಧಿಧಿಯಲ್ಲಿ ಕಳುವು ಮಾಡಿದ್ದಾರೆ.
ಒಂದೇ ರಾತ್ರಿ ಹತ್ತಕ್ಕೂ ಹೆಚ್ಚು ಮನೆಗಳ ಹಿತ್ತಾಳೆ ನಳ, 10 ರಿಂದ 20 ಅಡಿ ಉದ್ದದ ಪ್ಲಾಸ್ಟಿಕ್ ಪೈಪ್ ಸಹ ಹೊತ್ತೂಯ್ದಿರುವುದು ಸ್ಥಳೀಯ ನಿವಾಸಿಗಳಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಹಿರಿಯ ನ್ಯಾಯವಾದಿ ಕೆ.ಕೆ. ತೆರಗುಂಟಿ, ಮೃತ್ಯುಂಜಯ ಅಕ್ಕಿ, ಸೆಹೆರಾ ಹೀಗೆ, ನಾಯಿ ಸಾಕಿರದವರ ಮನೆ ಆಯ್ದುಕೊಂಡು ಕಳ್ಳರು ಕೈ ಚಳಕ ತೋರಿದ್ದಾರೆ.
ಕೆಲವನ್ನು ಸಡಿಲಗೊಳಿಸಿದ್ದು, ವಿಫಲ ಯತ್ನದ ಕುರುಹಾಗಿ ಹಾಗೇ ಉಳಿದಿವೆ. ಇಂತಹ ವಿಶೇಷ ತುರ್ತು ಸಂದರ್ಭಗಳಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ, ಸತತ ನೀರು ಸರಬರಾಜು ಕಂಪೆನಿ ಗ್ರಾಹಕರಿಗೆ ನೀಡಿಲ್ಲ. ಕಾಮಗಾರಿ ನಿರತ ಪ್ಲಂಬರ್ ಓರ್ವರಿಗೆ ಸಂಬಂಧಪಟ್ಟವರ ಸಂಪರ್ಕ ಸಂಖ್ಯೆ ನೀಡುವಂತೆ ದುಂಬಾಲು ಬಿದ್ದರೆ, “ಸರ್, ನಂಬರ್ ಯಾರು ಕೊಟ್ಟರು ಎಂದು ಕೇಳಿದರೆ.. ನಮ್ಮ ಹೆಸರು ದಯವಿಟ್ಟು ಹೇಳಬೇಡಿ’ ಎಂದು ಹೇಳುತ್ತಿದ್ದಾರೆ.
ಒಂದು ಲಿಖೀತ ದೂರು, ಆರ್‌ಆರ್ ಸಂಖ್ಯೆಯುಳ್ಳ ಬಿಲ್ ತುಂಬಿದ ರಸೀದಿ, ನಳ ಕಳುವಾದ ಚಿತ್ರ ಸಮೇತ ಜಲ ಮಂಡಳಿ ಕಚೇರಿ ತಂದು ಕೊಟ್ಟು, ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಎಫ್‌ಐಆರ್ ಪ್ರತಿ ಹರಿಸಿ, ಬಂದಲ್ಲಿ, ಸಂಬಂಧಿಧಿಸಿದವರ ಗಮನಕ್ಕೆ ತಂದು ಹೊಸ ನಳ ಅಳವಡಿಸುವುದಾಗಿ ಹೇಳುತ್ತಾರೆ ಮಂಜುನಾಥಪುರ ಭಾಗದ ಸೂಪರ್ ವೈಸರ್ ಸುಭಾಷ್.
ಅನೇಕ ಬಾರಿ ಕರೆ ಮಾಡಿ, ದೂರು ದಾಖಲಿಸಿದರೂ ಗುತ್ತಿಗೆ ಸಿಬ್ಬಂದಿ ದೂರು ಸರಿಯಾಗಿ ದಾಖಲಿಸಿಕೊಳ್ಳುವುದಿಲ್ಲ ಎಂದು ಸ್ಥಳೀಯರಾದ ಡಾ| ಎನ್.ಬಿ. ಶೂರಪಾಲಿ, ಅರವಿಂದ ಜೋಶಿ, ಕೆ.ಕೆ. ತೆರಗುಂಟಿ, ಮುಕುಂದ ಒಡವಿ, ಸಿ.ಪಿ. ಕುಲಕರ್ಣಿ, ಮೃತ್ಯುಂಜಯ ಅಕ್ಕಿ, ವಿಜಯ ಮಳೀಮಠ ಹಾಗೂ ಹರ್ಷವರ್ಧನ್ ಶೀಲವಂತ ಆರೋಪಿಸಿದ್ದಾರೆ.