Advertisement

ಕೆಲಸದಾಕೆ, ಸೆಕ್ಯೂರಿಟಿ ಗಾರ್ಡ್‌ಗಳಿಂದಲೇ ದರೋಡೆ

12:48 PM Aug 27, 2022 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ದರೋಡೆ ಹಾಗೂ ಕಳವು ಕೃತ್ಯಗಳಲ್ಲಿ ಮನೆಗೆಲಸ ಹಾಗೂ ಭದ್ರತೆಗಾಗಿ ನೇಮಕಗೊಂಡ ಸಿಬ್ಬಂದಿಯಿಂದಲೇ ನಡೆಯುತ್ತಿ ವೆ. ಮನೆಗೆಲಸ ಹಾಗೂ ಭದ್ರತೆಗಾಗಿ ನೇಮಕಗೊಂಡು ಮಾಲೀಕರ ವಿಶ್ವಾಸಗಳಿಸಿ ನಂತರ ಅಪರಾಧ ಕೃತ್ಯಗಳು ಎಸಗುತ್ತಿರುವುದು ವಿಚಾರಣೆಯಲ್ಲಿ ಪತ್ತೆಯಾಗುತ್ತಿದೆ.

Advertisement

ಶ್ರೀಮಂತರ ಮನೆಗಳನ್ನೇ ಟಾರ್ಗೆಟ್‌ ಮಾಡುತ್ತಿರುವ ಸೆಕ್ಯೂರಿಟಿಗಾರ್ಡ್‌ಗಳು ತಮ್ಮ ಸಹಚರರ ಜತೆ ಸೇರಿ ದರೋಡೆ, ಕಳ್ಳತನ ಕೃತ್ಯಕ್ಕೆ ಇಳಿಯತ್ತಿದ್ದಾರೆ. ಕೋಟ್ಯಂತರ ರೂ. ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ಪೈಕಿ ಕೆಲವರು ಅದೇ ಮನೆಯಲ್ಲಿ ಸೆಕ್ಯೂರಿಟಿಗಾರ್ಡ್‌ಗಳಾಗಿದ್ದರೆ, ಇನ್ನು ಕೆಲವರು ಮನೆ ಕೆಲಸದವರು ಕೊಟ್ಟ ಮಾಹಿತಿ ಮೇರೆಗೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಕೆಲ ಪ್ರಕರಣಗಳಲ್ಲಿ ಭದ್ರತಾ ಸಿಬ್ಬಂದಿಗಳು ತಮ್ಮ ಸಹಚರರ ನೆರವಿನೊಂದಿಗೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಕಳ್ಳತನ ನಡೆದ ಪ್ರದೇಶದ ಆಸು-ಪಾಸಿನಲ್ಲಿರುವ ಸೆಕ್ಯೂರಿಟಿಗಾರ್ಡ್‌ಗಳು ಕಳ್ಳರಿಗೆ ಬೀಗ ಹಾಕಿರುವ ಮನೆಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಈ ನಿಟ್ಟಿನಲ್ಲಿ ಸೆಕ್ಯೂರಿಟಿಗಾರ್ಡ್‌, ಮನೆಕೆಲಸದವರನ್ನು ನೇಮಿಸಿಕೊಳ್ಳುವ ಮುನ್ನ ಮಾಲೀಕರು ಅವರ ಹಿನ್ನೆಲೆಗಳನ್ನು ಪರಿಶೀಲಿಸಬೇಕು ಎಂದು ಪೊಲೀಸ್‌ ಅಧಿಕಾರಿ ತಿಳಿಸುತ್ತಾರೆ.

ಕೇಸ್‌ ನಂ.1: ಸೆಕ್ಯೂರಿಟಿ ಗಾರ್ಡ್‌ ಕೃತ್ಯ :

2 ತಿಂಗಳ ಹಿಂದೆ ಕೆಲಸ ಅರಸಿ ನೇಪಾಳದಿಂದ ನಗರಕ್ಕೆ ಬಂದಿದ್ದ ನೇಪಾಳದ ಪ್ರತಾಪ್‌ ಸಿಂಗ್‌ ಹಾಗೂ ಆತನ ಪತ್ನಿ ಸಂಗೀತಾ ಜೆಬಿನಗರದ ವಿನೋದ್‌ ಎಂಬುವವರ ಮನೆಯಲ್ಲಿ ಸೆಕ್ಯೂರಿಟಿಗಾರ್ಡ್‌ ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲ ಸಮಯದ ಬಳಿಕ ತಾವು ಕೆಲಸಕ್ಕಿದ್ದ ಮಾಲೀಕನ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಜು.6 ರಂದು ಜೆಬಿನಗರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು.

Advertisement

ಕೇಸ್‌ ನಂ.2 : ಕಲಸದಾಕೆಯ ಸುಲಿಗೆ:

ಬಸವೇಶ್ವರನಗರದ ನಿವಾಸಿ ವಿಘ್ನೇಶ್ವರಿ ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳ ಮೂಲದ ಅನು ಎಂಬಾಕೆ ತನ್ನ ಪತಿಯ ಜತೆ ಸೇರಿ ಫೆ.23ರಂದು ಮನೆ ಒಡತಿ ವಿಘ್ನೇಶ್ವರಿ ಕೈ-ಕಾಲು ಕಟ್ಟಿ, 1 ಕೋಟಿ ರೂ. ಚಿನ್ನಾಭರಣ ದೋಚಿ ಪರಾರಿಯಾಗಿದ್ದಳು.

ಕೇಸ್‌ ನಂ.3: ಸಿಬ್ಬಂದಿ ದುಷ್ಕೃ ತ: ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆ ಜಯಶ್ರೀ (83) ಮನೆಯ ಸಮೀಪದ ಮನೆಯಲ್ಲಿ ನೇಪಾಳ ಮೂಲದ ಖಡಕ್‌ ಸಿಂಗ್‌ ಸೆಕ್ಯೂರಿಟಿಗಾರ್ಡ್‌ ಆಗಿದ್ದ. ಜಯಶ್ರೀ ಒಂಟಿ ಯಾಗಿ ನೆಲೆಸಿರುವುದರ ಬಗ್ಗೆ ಮಾಹಿತಿ ಪಡೆದು ಕೊಂಡು ಆ.13ರಂದು ಐವರು ಸಹಚರರ ಜತೆ ಗೂಡಿ ವೃದ್ಧೆಯನ್ನು ಹತ್ಯೆಗೈದು 2.5 ಲಕ್ಷ ರೂ. ನಗದು, ಚಿನ್ನಾಭರಣ ದೋಚಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕೇಸ್‌ ನಂ.4:  ಸೆಕ್ಯೂರಿಟಿ ಕೃತ್ಯ : ಕೆ.ಜಿ.ಹಳ್ಳಿಯ ಫ್ಲ್ಯಾಟ್‌ವೊಂದರಲ್ಲಿ ಎಂಜಿನಿಯರ್‌ ದೀಪಕ್‌ ಕುಟುಂಬಸ್ಥರ ಜತೆ ವಾಸಿಸುತ್ತಿದ್ದರು. ಜ.6ರಂದು ತಿರುಪತಿಗೆ ಹೋದಾಗ ಅದೇ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್‌ ಇವರ ಮನೆಗೆ ಕನ್ನ ಹಾಕಿದ್ದ. ಸಿ.ಸಿ.ಕ್ಯಾಮೆರಾದಲ್ಲಿ ಕೃತ್ಯ ಪತ್ತೆಯಾಗಿದೆ.

ಮನೆ ಮಾಲೀಕರು ಸೂಕ್ತ ದಾಖಲೆ, ಹಿನ್ನೆಲೆ ಪರಿಶೀಲಿಸಿ ಸೆಕ್ಯೂರಿಟಿಗಾರ್ಡ್‌ಗಳನ್ನು ನೇಮಿಸಿದರೆ ಉತ್ತಮ. ಮನೆ ಕೆಲಸದವರು, ಸೆಕ್ಯೂರಿಟಿಗಾರ್ಡ್‌ಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಬ್ರಮಣ್ಯೇಶ್ವರ ರಾವ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ

 

ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next