ಲಿಂಗಸುಗೂರು: ಪಟ್ಟಣದ ಬೈಪಾಸ್ ರಸ್ತೆಯಿಂದ ಹೊಸ ರೈತ ಸಂಪರ್ಕ ಕೇಂದ್ರದವರೆಗೆ ನಡೆಯುತ್ತಿರುವ ಸಿ.ಸಿ ರಸ್ತೆ ಕಾಮಗಾರಿಯನ್ನು ಪಿಡಬ್ಲೂಡಿ ಎಇಇ ಗೋಪಾಲರೆಡ್ಡಿ ಪರಿಶೀಲನೆ ನಡೆಸಿದರು.
ಕೆಕೆಆರ್‌ಡಿಬಿಯ 40 ಲಕ್ಷ ರೂ. ಅನುದಾನದಲ್ಲಿ 6 ಮೀಟರ್ ಅಗಲದ ಸಿ.ಸಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು. ಅಲ್ಲದೇ ರೈತ ಸಂಪರ್ಕ ಕೇಂದ್ರ ಹಾಗೂ ಅಕ್ಕಪಕ್ಕದಲ್ಲಿ ನೂತನ ಬಡಾವಣೆಗಳು ಇರುವುದರಿಂದ ಮನೆಗಳ ನಿರ್ಮಾಣವಾಗುತ್ತಿದ್ದರಿಂದ ಬೃಹತ್ ಲಾರಿಗಳು ಓಡಾಟ ಹೆಚ್ಚಾಗಿರುತ್ತದೆ. ಹೀಗಾಗಿ ಭೂಮಿ ಕಪ್ಪು ಮಣ್ಣಿನಿಂದ ಕೂಡಿದ್ದರಿಂದ ಕಪ್ಪು ಮಣ್ಣು ತೆಗೆದು ಮರಂ ಹಾಕಿ ಗಟ್ಟಿಗೊಳಿಸಿ ಸಿ.ಸಿ ರಸ್ತೆ ಮಾಡಬೇಕು. ಮಳೆ ಬಂದಾಗ ನೀರು ನಿಲ್ಲದಂತೆ ಸಿ.ಸಿ ರಸ್ತೆ ಮಾಡುವಂತೆ ಜೆಇ ಯಲಗೂರೇಶ ಅವರಿಗೆ ಸೂಚನೆ ನೀಡಿದರು.