ಬೇತಮಂಗಲ: ಸುಮಾರು 3 ವರ್ಷಗಳಿಂದ ನಡೆಯುತ್ತಿರುವ ಬೇತಮಂಗಲ-ಕೊತ್ತೂರು ಹಾಗೂ ರಾಮಸಾಗರ ಕ್ರಾಸ್ ಬಳಿ ರಸ್ತೆ ಕಾಮಗಾರಿಗೆ ಮರ ಗಳು ಹಾಗೂ ವಿದ್ಯುತ್ ಕಂಬಗಳು ತೆರವುಗೊಳಿಸದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಬಗ್ಗೆ ಉದಯವಾಣಿ ಕೋಲಾರ ಆವೃತ್ತಿಯಲ್ಲಿ ಅ.7ರಂದು “”ಮರ, ಕಂಬ ತೆರವು ಮಾಡದಿದ್ರೆ ಕಾಮಗಾರಿ ಸ್ಥಗಿತ” ಶೀರ್ಷಿಕೆಯಡಿ ಪ್ರಕಟವಾಗಿದ್ದ ವರದಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಶುಕ್ರವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕಿ ರೂಪಕಲಾ ಶಶಿಧರ್, ನಿತ್ಯ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದು, ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಶೀಘ್ರ ಪೂರ್ಣ ಭರವಸೆ: ರಾಷ್ಟ್ರೀಯ ಪ್ರಾಧಿಕಾರದ ಹೆದ್ದಾರಿಯಾಗಿರುವ ಈ ರಸ್ತೆಯನ್ನು ಗುಜರಾತ್ ಮೂಲದ ಸಂಸ್ಥೆ ಪಿಚ್ಚಹಳ್ಳಿ-ಎನ್.ಜಿ.ಹುಲ್ಕೂರು ಗ್ರಾಮ ದವರೆಗೆ ರಸ್ತೆ ಅಭಿವೃದ್ಧಿಗಾಗಿ 54 ಕೋಟಿಗೆ ಗುತ್ತಿಗೆಪಡೆದುಕೊಂಡಿದ್ದು, ರಾಷ್ಟ್ರೀಯ ವಿಪತ್ತು ಎದುರಾಗಿ ಅನುದಾನ ಬಿಡುಗಡೆಯಾಗದೆ, ರಸ್ತೆ ಕಾಮಗಾರಿ ಸ್ಥಗಿತ ಗೊಳಿಸಲಾಗಿತ್ತು. ಅನುದಾನದಲ್ಲಿ ಸ್ವಲ್ಪ ಭಾಗವನ್ನು ಬಿಡುಗಡೆ ಮಾಡಿರುವ ಹಿನ್ನೆಲೆ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳ್ಳುವುದಾಗಿ ಭರವಸೆ ನೀಡಿದರು.
ವಿದ್ಯುತ್, ಅರಣ್ಯ ಇಲಾಖೆಗೆ ಸೂಚನೆ: ರಸ್ತೆಯ ಅಕ್ಕಪಕ್ಕದಲ್ಲಿ ರಸ್ತೆಗೆ ಅಡ್ಡವಾಗಿರುವ ವಿದ್ಯುತ್ ಕಂಬಗಳನ್ನು ಇಂದಿನಿಂದಲೇ (ಶುಕ್ರವಾರ) ಸ್ಥಳ ಗುರುತಿಸಿ ವಿದ್ಯುತ್ ಕಂಬಗಳನ್ನು ಮತ್ತೂಂದು ಕಡೆಗೆ ಸ್ಥಳಾಂತರ ಮಾಡಬೇಕೆಂದರು. ರಸ್ತೆ ಪಕ್ಕದಲ್ಲಿರುವ ಮರಗಳನ್ನು ಶೀಘ್ರವಾಗಿ ಗುತ್ತಿಗೆ ಮೂಲಕ ತೆರವುಗೊಳಿಸಿ ರಸ್ತೆ ಕಾಮಗಾರಿನಡೆಸಲುಅನುವುಮಾಡಿಕೊಡಬೇಕೆಂದು ಸೂಚಿಸಿದರು.
ರಸ್ತೆ ಎತ್ತರ ಮಾಡಿ: ಈ ರಸ್ತೆಯಲ್ಲಿ ಮಳೆ ನೀರು ನಿಲ್ಲುವುದರಿಂದ ಮಳೆ ಬಂದಾಗ ರಸ್ತೆಯೇ ಕಾಣದೆ ಅಪ ಘಾತ ಸಂಭವಿಸುತ್ತವೆ. ರಸ್ತೆಯನ್ನು ಎತ್ತರ ಮಾಡಿ ನಂತರ ಡಾಂಬರೀಕರಣ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು. ಈ ರಸ್ತೆ ಕಾಮಗಾರಿ ನಡೆಸಲು ಸ್ಥಳೀಯರಿಂದ ಹಾಗೂ ಇಲಾಖೆಯಿಂದ ಯಾವುದೇ ಸಮಸ್ಯೆಯಾದರೂ ತಮ್ಮ ಗಮನಕ್ಕೆ ತಂದು ಇತ್ಯರ್ಥಪಡಿಸಿಕೊಂಡು ರಸ್ತೆಗೆ ಮುಕ್ತಿ ನೀಡಿ ಎಂದರು.
ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ, ನಾರಾಯಣಸ್ವಾಮಿ, ಅರಣ್ಯ ಇಲಾಖೆ ಅಧಿಕಾರಿ ವೇಣು, ರವೀಂದ್ರ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪದ್ಮನಾಭ ರೆಡ್ಡಿ, ಬೇತಮಂಗಲ ಸೊಸೈಟಿ ನಿರ್ದೇಶಕರಾದ ಸುರೇಂದ್ರಗೌಡ, ಒಬಿಸಿ ಮುನಿ ಸ್ವಾಮಿ, ಎಪಿಎಂಸಿ ನಿರ್ದೇಶಕ ರಾಮಚಂದ್ರ, ಮುಖಂಡರಾದ ತಂಬಾರಹಳ್ಳಿ ಮುನೇಗೌಡ, ಶ್ರೀಧರ್‌ರೆಡ್ಡಿ, ಗುತ್ತಿಗೆದಾರರು, ರಾಷ್ಟ್ರೀಯ ಹೆದ್ದಾರಿಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕರು ಹಾಜರಿದ್ದರು.
ಸರ್ಕಾರದಿಂದ ಅನುದಾನ ಬಿಡುಗಡೆಯಾಗದೆ ಹಿನ್ನೆಲೆ ರಸ್ತೆ ಕಾಮಗಾರಿ ಸ್ಥಗಿತ ಮಾಡಲಾಗಿತ್ತು. ಸ್ವಲ್ಪ ಅನುದಾನ ಗುತ್ತಿಗೆದಾರರಿಗೆ ನೀಡಲಾಗಿದೆ. ರಸ್ತೆಯ ಪಕ್ಕದ ಮರ ಹಾಗೂ ವಿದ್ಯುತ್ ನಿಗಮದವರುಕಂಬಗಳನ್ನು ತೆರವು ಮಾಡಿದ್ದಾರೆ. ರಸ್ತೆ ಪೂರ್ಣಗೊಳಿಸಲಾಗುವುದು. ಶಾಸಕರು ಅನೇಕ ಬಾರಿ ಇಲಾಖೆಗೆ ಭೇಟಿ ನೀಡಿ ಈ ಬಗ್ಗೆ ಚರ್ಚಿಸಿದ್ದಾರೆ.
–ಮಲ್ಲಿಕಾರ್ಜುನ್, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಾಧಿಕಾರ