Advertisement

ರಸ್ತೆ ಅಗಲೀಕರಣ ಚುರುಕು

03:23 PM Aug 04, 2018 | Team Udayavani |

ಕಕ್ಕೇರಾ: ಪಟ್ಟಣದಲ್ಲಿ ರಸ್ತೆ ಅಗಲೀಕರಿಸಿ ಅಭಿವೃದ್ಧಿಪಡಿಸಲು ಶುಕ್ರವಾರ ಸೂಕ್‌ ಪೊಲೀಸ್‌ ಬಂದೋಬಸ್ತ್ನೊಂದಿಗೆ ಜೆಸಿಬಿ ಬಳಸಿ ಲೋಕೋಪಯೋಗಿ ಆದೇಶದ ಮೇರೆಗೆ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯ ನಡೆಯಿತು.

Advertisement

ಪಟ್ಟಣದ ವಾಲ್ಮೀಕಿ ವೃತ್ತ ಅಭಿವೃದ್ಧಿಗಾಗಿ ಬಲಶೆಟ್ಟಿಹಾಳ, ಹುಣಸಗಿ, ಶಾಂತಪುರ ಮೂರು ಮುಖ್ಯ ರಸ್ತೆಗಳವರೆಗೂ
ಅಂಗಡಿಗಳ ತೆರವುಗೊಳಿಸಲಾಯಿತು. ರಸ್ತೆ ಅಗಲೀಕರಣಕ್ಕೆ ಈಗಾಗಲೇ ವರ್ತಕರಿಗೆ ಮೂರು ಬಾರಿ ನೋಟಿಸ್‌ ನೀಡಿ
ಎಚ್ಚರಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಹಾಕಿಕೊಂಡಿದ್ದ ಶೆಡ್‌ಗಳನ್ನು ತೆಗೆದಿದ್ದರು.

ಶುಕ್ರವಾರ ಬೆಳಗ್ಗೆ ಅಧಿಕಾರಿಗಳು ಐದು ಜೆಸಿಬಿಗಳ ಮೂಲಕ ಅಂಗಡಿಗಳ ತೆರವು ಕಾರ್ಯ ಭರ್ಜರಿ ನಡೆಸಿದರು. ರಸ್ತೆಯ ಎರಡು ಬದಿಗೂ ಜೆಸಿಬಿ ನಿಂತು ಅಂಗಡಿಗಳ ತೆರವುಗೆ ಮುಂದಾಗಿದ್ದರಿಂದ ಪಟ್ಟಣದಲ್ಲಿ ದೂಳು ಎದ್ದು ಕೆಲ
ಸಮಯ ಸಾರ್ವಜನಿಕರು ಮುಗು ಕಟ್ಟಿಕೊಂಡು ಸಂಚರಿಸುವಂತಾದರೆ ಇನ್ನೂ ವಾಹನ, ಬೈಕ್‌ ಸವಾರರು ಸಂಚಾರಕ್ಕೆ ಪರಿತಪಿಸಬೇಕಾಯಿತು.

ಬೀದಿಪಾಲಾದ ವರ್ತಕರು: ಅನೇಕ ವರ್ಷಗಳಿಂದಲೂ ಅನಧಿಕೃತವಾಗಿ ಅಂಗಡಿ ಹಾಕಿಕೊಂಡು ವ್ಯಾಪಾರಕ್ಕೆ ಹಣಿಯಾಗಿದ್ದರು. ಆದರೆ ರಸ್ತೆ ಅಗಲೀಕರಣ ನಿರ್ಧಾರದಿಂದ ಸಣ್ಣ ಮತ್ತು ಮಧ್ಯಮ ವರ್ಗದ ವರ್ತಕರು ವ್ಯಾಪಾರಕ್ಕೆ ಸ್ಥಳಾವಕಾಶ ಇಲ್ಲದೆ ಬೀದಿಪಾಲಾಗುವಂತೆ ಮಾಡಿದೆ ಎಂದು ಜನರ ಅಭಿಪ್ರಾಯವಾಗಿದೆ. 

ಯಾವ ರೀತಿ ಅಭಿವೃದ್ಧಿ?: 2018-19ನೇ ಸಾಲಿನ ಎಚ್‌ಕೆಆರ್‌ಡಿಬಿ ವತಿಯಿಂದ ರಸ್ತೆ ಅಭಿವೃದ್ಧಿಗಾಗಿ ಮಾರ್ಚ್‌ ತಿಂಗಳಲ್ಲಿಯೇ 50 ಲಕ್ಷ ರೂ. ಅನುದಾನದ ಟೆಂಡರ್‌ ಕರೆಯಲಾಗಿತ್ತು. ಆದರೆ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದ್ದರಿಂದ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಸದ್ಯ ವಾಲ್ಮೀಕಿ ವೃತ್ತದಿಂದ
50 ಮೀಟರ್‌ನಂತೆ ಮೂರು ಪ್ರಮುಖ ರಸ್ತೆಗೆ ಡಾಂಬರೀಕರಣ ಹಾಕಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟು 150 ಮೀಟರ್‌ ಉದ್ದದ ರಸ್ತೆ ಅಭಿವೃದ್ಧಿಯಾಗಲಿದೆ.

Advertisement

ರಸ್ತೆ ಮಧ್ಯ ಭಾಗದಿಂದ 7.5 ಮೀಟರ್‌ನಂತೆ ಎರಡು ಬದಿ ಸೇರಿ ಒಟ್ಟು 15 ಮೀಟರ್‌ ರಸ್ತೆ ಅಗಲೀಕರಣಗೊಳಿಸಲಾಗುತ್ತಿದೆ ಎನ್ನಲಾಗುತ್ತಿ¨ 

ಅಂಗಡಿ ತೆರವು ಕಾರ್ಯ ಚುರುಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ವರ್ತಕರಿಗೆ ಮೂರು ಬಾರಿ ನೋಟಿಸ್‌ ನೀಡಿತ್ತು. ಅಲ್ಲದೆ ಡಂಗುರ ಸಾರಲಾಗಿತ್ತು. ತೆರವುಗೊಳಿಸುವ ಕಾರ್ಯ ಮುಗಿದ ತಕ್ಷಣವೇ ಎರಡು-ಮೂರು ದಿನಗಳಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುವುದು. 
ಸುಭಾಶ್ಚಂದ್ರ, ಎಇ 

Advertisement

Udayavani is now on Telegram. Click here to join our channel and stay updated with the latest news.

Next