Advertisement

ಇಂದಿನಿಂದ ರೋಡ್ ಸೇಫ್ಟಿ ಕ್ರಿಕೆಟ್ ಕೂಟ: ಎಷ್ಟು ಗಂಟೆಗೆ? ಯಾವ ಚಾನೆಲ್ ನಲ್ಲಿ ನೋಡಬಹುದು?

04:51 PM Sep 10, 2022 | Team Udayavani |

ಕಾನ್ಪುರ: ದಿಗ್ಗಜ ಕ್ರಿಕೆಟಿಗರ ಬಹು ನಿರೀಕ್ಷಿತ ಕ್ರಿಕೆಟ್ ಕೂಟ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ 2022 ಇಂದಿನಿಂದ ಆರಂಭವಾಗಲಿದೆ. ಎಂಟು ತಂಡಗಳ ಕೂಟವು ಇಂದು ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಉದ್ಘಾಟನೆಯಾಗಲಿದೆ.

Advertisement

ಟಿ20 ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಪ್ರತಿ ತಂಡವು ಲೀಗ್ ಹಂತದಲ್ಲಿ ತಲಾ ಐದು ಪಂದ್ಯಗಳನ್ನು ಆಡುತ್ತದೆ. ಪ್ರತಿ ತಂಡವು ಐದು ತಂಡಗಳ ಎದುರಾಗಿ ಆಡಲಿದೆ. ಲೀಗ್ ಮಾದರಿಯ ಅಂತ್ಯದಲ್ಲಿ ಟಾಪ್ ನಾಲ್ಕು ತಂಡಗಳು ಸೆಮಿ ಫೈನಲ್ ಆಡಲಿದೆ. ಫೈನಲ್ ಪಂದ್ಯವು ಅಕ್ಟೋಬರ್ 1ರಂದು ರಾಯ್ಪುರದಲ್ಲಿ ನಡೆಯಲಿದೆ.

ಇಂದು ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಭಾರತ ತಂಡ ತನ್ನ ಎರಡನೇ ಪಂದ್ಯವನ್ನು ಸೆ.14ರಂದು ವೆಸ್ಟ್ ಇಂಡಿಸ್ ವಿರುದ್ಧ, ಮೂರನೇ ಪಂದ್ಯವನ್ನು ಸೆ.18ರಂದು  ನ್ಯೂಜಿಲ್ಯಾಂಡ್ ವಿರುದ್ಧ, ನಾಲ್ಕನೇ ಪಂದ್ಯವನ್ನು ಸೆ.21ರಂದು ಬಾಂಗ್ಲಾದೇಶ  ವಿರುದ್ಧ, ಲೀಗ್ ನ ಕೊನೆಯ ಪಂದ್ಯವನ್ನು ಸೆ.24ರಂದು ಇಂಗ್ಲೆಂಡ್ ವಿರುದ್ಧ ಆಡಲಿದೆ.

ಇದನ್ನೂ ಓದಿ:ಯಡಿಯೂರಪ್ಪ ಕೃಷ್ಣನಂತೆ ಬೊಮ್ಮಾಯಿ ಅರ್ಜುನನಂತೆ; ಯಾತ್ರೆ ಶುರುವಾಗಿದೆ: ನಳಿನ್ ಕಟೀಲ್

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2022 ರಲ್ಲಿ, ಎಂಟು ತಂಡಗಳು ಆಡುತ್ತಿವೆ. ಇಂಡಿಯಾ ಲೆಜೆಂಡ್ಸ್, ಬಾಂಗ್ಲಾದೇಶ ಲೆಜೆಂಡ್ಸ್, ಶ್ರೀಲಂಕಾ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್, ನ್ಯೂಜಿಲೆಂಡ್ ಲೆಜೆಂಡ್ಸ್, ವೆಸ್ಟ್ ಇಂಡೀಸ್ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡಗಳು ಆಡಲಿದೆ.

Advertisement

ಎಲ್ಲಿ ನೇರಪ್ರಸಾರ: ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಅನ್ನು ಕಲರ್ಸ್ ಸಿನೆಪ್ಲೆಕ್ಸ್ ಎಚ್‌ಡಿ, ಕಲರ್ಸ್ ಸಿನೆಪ್ಲೆಕ್ಸ್, ಕಲರ್ಸ್ ಸಿನೆಪ್ಲೆಕ್ಸ್ ಸೂಪರ್‌ ಹಿಟ್ಸ್ ಮತ್ತು ಸ್ಪೋರ್ಟ್ಸ್ 18 ಖೇಲ್‌ ನಂತಹ ಚಾನೆಲ್‌ ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ವೂಟ್, ಜಿಯೋ ಟಿವಿಯಲ್ಲೂ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಸಿಗಲಿದೆ.

ಇಂಡಿಯಾ ಲೆಜೆಂಡ್ಸ್ ತಂಡ: ಸಚಿನ್ ತೆಂಡೂಲ್ಕರ್ (ನಾ), ಯುವರಾಜ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಮುನಾಫ್ ಪಟೇಲ್, ಸುಬ್ರಮಣ್ಯಂ ಬದ್ರಿನಾಥ್, ಸ್ಟುವರ್ಟ್ ಬಿನ್ನಿ, ನಮನ್ ಓಜಾ, ಮನ್‌ಪ್ರೀತ್ ಗೋನಿ, ಪ್ರಗ್ಯಾನ್ ಓಜಾ, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ರಾಜೇಶ್ ಪವಾರ್, ಮತ್ತು ರಾಹುಲ್ ಶರ್ಮಾ.

Advertisement

Udayavani is now on Telegram. Click here to join our channel and stay updated with the latest news.

Next