Advertisement

ರಸ್ತೆ ಸುರಕ್ಷತೆ ಜಾಗೃತಿ: ಕಿರುಚಿತ್ರ ಬಿಡುಗಡೆ

10:36 AM Jan 01, 2018 | |

ಪತ್ರಿಕಾಭವನ: ಕನ್ನಡಕ ಪ್ರೊಡಕ್ಷನ್‌ ಹೌಸ್‌, ರೋಟರಿ ಕ್ಲಬ್‌ ಸೆಂಟ್ರಲ್‌, ಲಯನ್ಸ್‌ ಕ್ಲಬ್‌ ಇದರ ವತಿಯಿಂದ ನಿರ್ಮಿಸಲಾದ ರಸ್ತೆ ಜಾಗೃತಿ ಕುರಿತಾದ ಕಿರುಚಿತ್ರ ಇತ್ತೀಚೆಗೆ ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಂಡಿತು.

Advertisement

ಲಯನ್ಸ್‌ ಕ್ಲಬ್‌ ಅಧ್ಯಕ್ಷ ವೆಂಕಟೇಶ್‌ ಬಾಳಿಗ ಮಾತನಾಡಿ, ನಗರದಲ್ಲಿ ಸುಮಾರು 5000 ವಾಹನಗಳು ತಿಂಗಳಿಗೆ ರಸ್ತೆಗಿಳಿಯುತ್ತದೆ. ಅದೇ ಕಾರಣಕ್ಕೆ ದಿನ ನಿತ್ಯ ಬ್ಲಾಕ್‌ನಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೊಂದಡೆ
ಹೆಲ್ಮೆಟ್‌ ಧರಿಸದೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಿಸುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಿರುಚಿತ್ರ ನಿರ್ಮಿಸಲಾಗಿದೆ ಎಂದರು.

ಕನ್ನಡಕ ಪ್ರೊಡಕ್ಷನ್‌ ಹೌಸ್‌ನ ಲಕ್ಷ್ಮೀ ಮೋಹನದಾಸ ಕಾಮತ್‌ ಮಾತನಾಡಿ, ನನ್ನ ಪತಿ ಮೋಹನದಾಸ ಕಾಮತ್‌ ಅವರು ವಿದೇಶದಲ್ಲಿದ್ದು, ಅವರು ಮಂಗಳೂರಿಗೆ ಬಂದಾಗ ಇಲ್ಲಿ ಸಂಭವಿ ಸುತ್ತಿರುವ ಅಪಘಾತಗಳನ್ನು ನೋಡಿ ಬೇಸರ
ವ್ಯಕ್ತ ಪಡಿಸುತ್ತಿದ್ದರು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ನಿಟ್ಟಿನಲ್ಲಿ ಕಿರುಚಿತ್ರ ನಿರ್ಮಿಸಲಾಗಿದೆ ಎಂದರು. ಶ್ರೀನಿವಾಸ್‌ ಇಂದಾಜೆ, ರೋಟರಿ ಕ್ಲಬ್‌ ನ ಅಧ್ಯಕ್ಷ ರೇಮಂಡ್‌ ಡಿ’ ಕುನ್ಹಾ, ವಿಠೊಭ ಭಂಡಾರ್ಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next