ಚಿಂಚೋಳಿ: ಪ್ರತಿನಿತ್ಯ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೇ ನಮ್ಮ ಜೀವನ ಸುಖಕರವಾಗಿರುತ್ತದೆ ಎಂದು ಡಿವೈಎಸ್ಪಿ ಬಸವೇಶ್ವರ ಹೀರಾ ಹೇಳಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ವತಿಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ, ಓದು ಕರ್ನಾಟಕ, ನಲಿಕಲಿ, ಕಿಟ್ ಬಳಕೆ ಮತ್ತು ಕಾನೂನು ಅರಿವು ರಸ್ತೆ ಸುರಕ್ಷತೆ ನಿಯಮ, ಕೋವಿಡ್ -19ರಲ್ಲಿ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು ಕುರಿತು ಕಾರ್ಯಾಗಾರ ಹಾಗೂ 2022 ಸಾಲಿನ ಹೊಸ ವರ್ಷದ ಕ್ಯಾಲೆಂಡರ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ತಮ್ಮ ಬದುಕಿಗಾಗಿ ಮತ್ತು ಸಂಸಾರಕ್ಕಾಗಿ ಹೆಲ್ಮೆಟ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ರಸ್ತೆ ನಿಯಮ ಪಾಲಿಸಿ ಜೀವ ಉಳಿಸಿಕೊಳ್ಳಬೇಕು. ವಾಹನಗಳ ವಿಮೆ ಮತ್ತು ಪರವಾನಗಿ ಹೊಂದಿರಬೇಕು ಎಂದು ಹೇಳಿದರು.
ತಹಶೀಲ್ದಾರ್ ಅಂಜುಮ ತಬಸುಮ್, ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಕೊರವಿ, ಮಲ್ಲಿಕಾರ್ಜುನ ಪಾಲಾಮೂರ, ಬಿಇಒ ರಾಚಪ್ಪ ಭದ್ರಶೆಟ್ಟಿ. ಬಿಆರ್‌ಸಿ ಮಾರುತಿ ಯಂಗನೋರ ಮಾತನಾಡಿದರು.
ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಠಾಕ್ರು ಚವ್ಹಾಣ, ಕಾಶೀನಾಥ ದಿನ್ನಿ, ದೇವಿದಾಸ ರಾಠೊಡ, ಮಾರುತಿ ಪತಂಗೆ, ಸರೋಜಾದೇವಿ, ಸಂಗ್ರಾಮ ಉಚ್ಚೇದ, ಗೋಪಾಲ ಯಂಪಳ್ಳಿ, ಗುರುನಾಥ ರಾಠೊಡ ಇದ್ದರು.