ಮಂಡ್ಯ: ರಸ್ತೆ ಗುಂಡಿ ಮುಚ್ಚುವಂತೆ ಸಾರ್ವಜನಿಕರಿಂದ ಮನವಿಗಳು ಬರುತ್ತಲೇ ಇದ್ದು ರಸ್ತೆ ಗುಂಡಿ ಮುಚ್ಚುವ ಕೆಲಸ ನಿಲ್ಲಲ್ಲ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಹೇಳಿದರು.
ನಗರದಲ್ಲಿ 7ನೇ ದಿನವೂ ರಸ್ತೆ ಗುಂಡಿ ಮುಚ್ಚುವ ಅಭಿಯಾನ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿಯೇ ಮುಚ್ಚಿಸುತ್ತಿದ್ದೇನೆ. ಮೊದಲು ವೆಟ್‌ಮಿಕ್ಸ್ ಹಾಕಿಸಿ ನಂತರ ನೀರು ಹಾಯಿಸಿ ರಸ್ತೆ ಗಟ್ಟಿಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಬಂಧ ಪಟ್ಟವರು ರಸ್ತೆ ದುರಸ್ತಿಗೊಳಿಸಿ ಡಾಂಬರೀಕರಣ ಮಾಡದಿದ್ದರೆ ನಾನೇ ಸ್ವಂತ ಖರ್ಚಿನಲ್ಲಿ ಡಾಂಬರೀಕರಣ ಮಾಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ದುರಸ್ತಿ ಮಾಡಿಸಲಿ: ರಸ್ತೆ ಗುಂಡಿ ಮುಚ್ಚುವ ಮೂಲಕ ಗಿಮಿಕ್ ಮಾಡುತ್ತಿದ್ದಾರೆಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ. ರಸ್ತೆ ಗುಂಡಿಯಿಂದ ಸಂಭವಿಸಿದ ಅಪಘಾತದಲ್ಲಿ ನಿವೃತ್ತ ಸೈನಿಕ ಕುಮಾರ್ ಅವರ ಸಾವಿನಿಂದ ಆ ಕುಟುಂಬಕ್ಕೆ ಆಗಿರುವ ನೋವನ್ನು ಕಣ್ಣಾರೆ ನೋಡಿದ್ದೇನೆ. ಈ ಹಿನ್ನೆಲೆ ಮಾನವೀಯ ದೃಷ್ಟಿಯಿಂದ ರಸ್ತೆ ಗುಂಡಿ ಮುಚ್ಚಿ ಜನರ ಪ್ರಾಣ ಉಳಿಸುವ ಅಭಿಯಾನ ಮಾಡಲಾಗುತ್ತಿದೆ. ಇನ್ನಾದರೂ ಸರ್ಕಾರ, ಜಿಲ್ಲಾಡಳಿತ ಹಾಗೂಸಂಬಂಧಪಟ್ಟವರು ಕೂಡಲೇ ರಸ್ತೆ ದುರಸ್ತಿ ಮಾಡಿಸಲಿ ಎಂದು ಆಗ್ರಹಿಸಿದರು.
Related Articles
ಚರಂಡಿ ದುರಸ್ತಿಗೊಳಿಸಿ: ಇದೇ ಸಂದರ್ಭದಲ್ಲಿ ನಂದಾ ಟಾಕೀಸ್ ಮುಂಭಾಗದ ಆಟೋ ನಿಲ್ದಾ ಣದ ಚರಂಡಿಯಲ್ಲಿ ಸಂಗ್ರಹವಾಗುವ ಕೊಳಚೆನೀರಿನಿಂದ ಸೊಳ್ಳೆಗಳು ಹೆಚ್ಚಿದ್ದು, ಸಾಂಕ್ರಾಮಿಕರೋಗ ಹರಡುವ ಭೀತಿ ಎದುರಾಗಿದೆ. ಆದ್ದರಿಂದಚರಂಡಿ ದುರಸ್ತಿಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮಹಾಲಿಂಗೇಗೌಡ, ಶೀಘ್ರವೇ ಮಾಡಿಸಿಕೊಡುವುದಾಗಿ ತಿಳಿಸಿದರು.
ಮಂಗಳವಾರ ನಗರದ ನಂದಾ ಟಾಕೀಸ್, ಆನೆ ಪಾರ್ಕ್, ಅಶೋಕನಗರ, ಕಲ್ಲಹಳ್ಳಿ ಸೇರಿ ಕೆಲವೆಡೆ ಗುಂಡಿ ಮುಚ್ಚಿಸಿ ಟ್ಯಾಂಕರ್‌ಗಳಿಂದ ನೀರು ಹಾಯಿಸಲಾಯಿತು. ಇದೇ ಸಂದರ್ಭದಲ್ಲಿ ಮೋಹನ್‌ಗೌಡ ಮುದಿಗೌಡನಕೊಪ್ಪಲು, ವಿ.ಟಿ. ವೆಂಕಟೇಶ್, ಶ್ರೀನಿವಾಸ್, ವಿಶ್ವನಾಥ್ ಮತ್ತಿತರರು ಇದ್ದರು.
ರಸ್ತೆ ಗುಂಡಿ ಮುಚ್ಚುವ ಅಭಿಯಾನಕ್ಕೆ ನಗರದ ಸಾರ್ವಜನಿಕರಿಂದಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ, ನಾನು ನನ್ನ ಸೇವೆ ಮುಂದುವರಿಸುತ್ತೇನೆ.– ಮಹಾಲಿಂಗೇಗೌಡ ಮುದ್ದನಘಟ್ಟ ಜೆಡಿಎಸ್ ಜಿಲ್ಲಾ ವಕ್ತಾರ