Advertisement

Road Mishap ಕಾರ್ನಾಡು: ಢಿಕ್ಕಿ; ರಸ್ತೆ ಬದಿ ಉರುಳಿ ಬಿದ್ದ ಕಾರು

12:47 AM Sep 25, 2023 | Team Udayavani |

ಮೂಲ್ಕಿ: ಇಲ್ಲಿಯ ಕಾರ್ನಾಡು ಹೆದ್ದಾರಿಯಲ್ಲಿ ಕಾರುಗಳೆರಡರ ನಡುವೆ ಸಂಭವಿಸಿದ ಅವಘಡದಲ್ಲಿ ಒಂದು ಕಾರು ಸುಮಾರು 20 ಅಡಿ ಆಳಕ್ಕೆ ಉರುಳಿ ಬಿದ್ದಿದ್ದು, ಚಾಲಕ ಸಣ್ಣ ಪುಟ್ಟ ತರಚಿದ ಗಾಯದೊಂದಿಗೆ ಪಾರಾಗಿದ್ದಾರೆ.

Advertisement

ಮಂಗಳೂರಿನತ್ತ ಕಾರಿನಲ್ಲಿಯೇ ಹೋಗುತ್ತಿದ್ದ ಯುವಕನ ಕಾರಿಗೆ ಮತ್ತೊಂದು ಕಾರು ಅಡ್ಡವಾಗಿ ದಾಟುತ್ತಿದ್ದಾಗ ವೇಗದಲ್ಲಿದ್ದ ಯುವಕ ಹತೋಟಿ ಕಳೆದುಕೊಂಡು ಹೆದ್ದಾರಿ ಬದಿಯ ಹಳ್ಳಕ್ಕೆ ಉರುಳಿ ಬಿದ್ದರು. ಕಾರಿನೊಳಗೆ ಏರ್‌ ಬ್ಯಾಗ್‌ ಇದ್ದ ಪರಿಣಾಮ ಅವರಿಗೆ ಗಾಯವಾಗಿಲ್ಲ. ಮತ್ತೊಂದು ಕಾರಿಗೂ ಹಾನಿಯಾಗಿದೆ.

ಕಾರಿನಲ್ಲಿತ್ತು ಎರಡು ನಾಗರ ಹಾವು
ಸ್ವಲ್ಪ ಸಮಯದ ಅನಂತರ ಕ್ರೇನ್‌ ಮೂಲಕ ಕಾರನ್ನು ಎತ್ತುವ ಕೆಲಸ ಪ್ರಾರಂಭಿಸಲಾಯಿತು. ಆಗ ಕಾರಿನ ಒಳಗೆ ಎರಡು ನಾಗರ ಹಾವುಗಳು ಹೆಡೆ ಎತ್ತಿ ನಿಂತಿರುವುವು ಪತ್ತೆಯಾಗಿದ್ದು, ಕಾರ್ಯಾಚರಣೆಗೆ ಅಡ್ಡಿಯಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next