ತೆಕ್ಕಟ್ಟೆ: ತೆಕ್ಕಟ್ಟೆ ರಾ.ಹೆ. 66ರ ಪ್ರಮುಖ ಜಂಕ್ಷನ್ನಲ್ಲಿ ಚಲಿಸುತ್ತಿದ್ದ ಈಚರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಘಟನೆ ನ. 28ರಂದು ಬೆಳಗ್ಗೆ ಗಂಟೆ 11 ಗಂಟೆಯ ಸುಮಾರಿಗೆ ಸಂಭವಿಸಿದೆ.
ಕುಂದಾಪುರದಿಂದ ಉಡುಪಿ ಕಡೆಗೆ ಮರಳು ಸಾಗಿಸುತ್ತಿದ್ದ ಈಚರ್ ವಾಹನ ಎದುರಿನಲ್ಲಿರುವ ಚಲಿಸುತ್ತಿದ್ದ ವಾಹನವನ್ನು ತಪ್ಪಿಸುವ ಭರದಲ್ಲಿ ಆಯತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದೆ. ಈ ಪ್ರಮುಖ ಜಂಕ್ಷನ್ನಲ್ಲಿ ಸದಾ ಜನದಟ್ಟಣೆಯಿಂದ ಕೂಡಿದ್ದು, ಅದೃಷ್ಟವಶಾತ್ ಸಂಭವನೀಯ ಭಾರೀ ಅವಘಡವೊಂದು ತಪ್ಪಿದಂತಾಗಿದೆ.
ಗೊಂದಲಮಯ ಜಂಕ್ಷನ್
ತೆಕ್ಕಟ್ಟೆಯಲ್ಲಿ ಗ್ರಾಮೀಣ ಸಂಪರ್ಕ ರಸ್ತೆಯಿಂದ ಬರುವ ವಾಹನಗಳು ಏಕಾಏಕಿ ರಾ.ಹೆ. 66 ಅನ್ನು ಪ್ರವೇಶಿಸುತ್ತಿದ್ದು, ರಸ್ತೆಯ ಎರಡು ಕಡೆಗಳಲ್ಲಿ ಸಮೀಪದಲ್ಲಿಯೇ ಬಸ್ ತಂಗುದಾಣದಲ್ಲಿ ಬಸ್ ರಸ್ತೆಯ ಮೇಲೆ ನಿಲ್ಲಿಸುವ ಪರಿಣಾಮ ವಾಹನ ಸವಾರರಿಗೆ ಗೊಂದಲವಾಗುತ್ತಿದೆ. ಇದೇ ಕಾರಣದಿಂದ ಇಲ್ಲಿ ಹಲವು ಅವಘಡಗಳು ಸಂಭವಿಸಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.