ಕೊಲ್ಲೂರು: ಚಿತ್ತೂರು ಬಳಿ ರಸ್ತೆಯ ಅಂಚಿನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಇಲ್ಲಿನ ನಿವಾಸಿ ಶೀನಪ್ಪ ಶೆಟ್ಟಿ ಅವರು ಪತ್ನಿಗೆ ಔಷಧ ತರಲೆಂದು ರಾಜ್ಯ ಹೆದ್ದಾರಿಯ ಚಿತ್ತೂರು ಎಂಬಲ್ಲಿ ಮಣ್ಣಿನ ರಸ್ತೆಯಲ್ಲಿ ಸಾಗುತ್ತಿದ್ದಾಗ ಬೈಕ್ ಸವಾರ ಆನಂದ ಎಂಬಾತ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಮುಂಬಯಿ -ಅಹ್ಮದಾಬಾದ್ ಹೆದ್ದಾರಿ: 12,000 ಲೀಟರ್ ತೈಲ ಇದ್ದ ಟ್ಯಾಂಕರ್ ಪಲ್ಟಿ
ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.