Advertisement

ಟಿಪ್ಪರ್‌ ಲಾರಿ ಡಿಕ್ಕಿ: ಊಬರ್‌ ಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳಾ ಟೆಕಿ ದುರ್ಮರಣ

09:53 AM Apr 03, 2024 | Team Udayavani |

ಬೆಂಗಳೂರು: ಟಿಪ್ಪರ್‌ ಲಾರಿ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳಾ ಟೆಕಿಯೊಬ್ಬರು ಮೃತಪಟ್ಟಿರುವ ಘಟನೆ ವರ್ತೂರು ಮುಖ್ಯರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

Advertisement

ನಗರದ ಚನ್ನಸಂದ್ರ ನಿವಾಸಿ ದೀಪಿಕಾ (27) ಮೃತ ಉದ್ಯೋಗಿ. ದಾವಣಗೆರೆ ಮೂಲದ ದೀಪಿಕಾ, ನಗರದ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಸೋಮವಾರ ತಡರಾತ್ರಿ 11.30ರ ಸುಮಾರಿಗೆ ಕೋರಮಂಗಲದಲ್ಲಿನ ಸ್ನೇಹಿತೆಯ ಮನೆಗೆ ಹೋಗಿದ್ದ ಅವರು, ಊಬರ್‌ ಆ್ಯಪ್‌ನಲ್ಲಿ ಬೈಕ್‌ ಬುಕ್‌ ಮಾಡಿಕೊಂಡು ಚನ್ನಸಂದ್ರದ ಮನೆಗೆ ವಾಪಸ್‌ ಹೋಗುತ್ತಿದ್ದರು. ಅದೇ ವೇಳೆ ಹಿಂದಿನಿಂದ ಅತೀ ವೇಗವಾಗಿ ಬಂದ ಟಿಪ್ಪರ್‌ ಲಾರಿ ಚಾಲಕ ಊಬರ್‌ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕೆಳಗೆ ಬಿದ್ದ ದೀಪಿಕಾ ಕಾಲ ಮೇಲೆ ಲಾರಿಯ ಚಕ್ರಗಳು ಹರಿದಿವೆ. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಟಿಪ್ಪರ್‌ ಲಾರಿ ಚಾಲಕ ಕನಯ್ಯಲಾಲ್‌ನನ್ನು ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ವೈಟ್‌ಫೀಲ್ಡ್‌ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next