Advertisement

ಪಾವಗಡದಲ್ಲಿ ಪ್ರತ್ಯೇಕ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

01:22 PM Oct 05, 2022 | Team Udayavani |

ಪಾವಗಡ : ದಸರಾ ಹಬ್ಬದ ಅಯುಧ ಪೂಜಾ ದಿನಾ ಮಂಗಳವಾರ ರಾತ್ರಿ ಪಾವಗಡ ಪಟ್ಟಣ ಸಮೀಪ ಮೂರು ಅಪಘಾತಗಳು ನಡೆದಿದ್ದು ಸ್ಥಳದಲ್ಲಿಯೇ ಇಬ್ಬರು ಬೈಕ್ ಸವಾರರು ಮೃತ ಪಟ್ಟಿದ್ದು 4 ಜನರಿಗೆ ತೀವ್ರತರಹ ಗಾಯಗಳಾಗಿದ್ದು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ತುಮಕೂರು ಹಾಗೂ ಬೆಂಗಳೂರಿಗೆ ರವಾನಿಸಿಲಾಗಿದೆ.

Advertisement

ಘಟನೆ ಒಂದು : ಪಟ್ಟಣದ ಶಿರಾ ರಸ್ತೆಯಲ್ಲಿಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಕನ್ನಮೇಡಿಯ 37 ವರ್ಷದ ರವಿ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದು , ಹಿಂಬದಿ ಸವಾರ ಮಲ್ಲಕಾರ್ಜುನ್ ಮತ್ತು ಮತ್ತೊಂದು ಬೈಕ್ ನಲ್ಲಿದ್ದ ಕೃಷ್ಣಗಿರಿ ಆಲದಮರದಹಟ್ಟಿಯ ಶಿವಲಿಂಗ ಮತ್ತು ಗಂಗಮ್ಮ ಎಂಬುವವರಿಗೆ ಗಾಯಗಳಾಗಿದ್ದು ಅವರನ್ನು ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ.

ಘಟನೆ ಎರಡು : ಕುರುಬರ ಹಳ್ಳಿ ಗೇಟ್ ಬಳಿ ನಡೆದುಕೊಂಡು ಹೋಗುತ್ತಿದ್ದಗಂಗಸಾಗರದ ನಲ್ಲಪ್ಪ ಎನ್ನುವವರಿಗೆ ಅಪರಿಚಿತ ಬೈಕ್ ಗುದ್ದಿ ಪರಾರಿಯಾಗಿದ್ದು ನಲ್ಲಪ್ಪ ಅವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ರವಾನಿಸಲಾಗಿದೆ.

ಘಟನೆ ಮೂರು : ತುಮಕೂರು ರಸ್ತೆಯ ಮಾರ್ಗದ ಕಣೀವೇನಹಳ್ಳಿ ಗೇಟ್ ಬಳಿ ಬೈಕ್ ಗೆ ಅಪರಿಚಿತ ಕಾರೊಂದು ಗುದ್ದಿ ಪರಾರಿಯಾಗಿದ್ದು, ಸ್ಥಳದಲ್ಲಿ ಮಡಕಶಿರಾ ತಾಲ್ಲೂಕಿನ ಶಿವಾಪುರದ 36 ವರ್ಷದ ಈರಲಿಂಗಪ್ಪ ಎನ್ನುವರು ಸ್ಥಳದಲ್ಲೇ ಮೃತ ಪಟ್ಟಿದ್ದು, ರಮೇಶ್ ಎನ್ನುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,
ಪಾವಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ : ಆಸ್ಪತ್ರೆಯ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ: ವೈದ್ಯ ಸೇರಿ ಇಬ್ಬರು ಮಕ್ಕಳು ಬೆಂಕಿಗಾಹುತಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next