Advertisement

ಪಾಲಡ್ಕ: ಕಾರುಗಳ ನಡುವೆ ಭೀಕರ ಅಪಘಾತ, ಹಲವರಿಗೆ ಗಾಯ

09:31 PM Feb 19, 2023 | Team Udayavani |

ಅರಂತೋಡು : ಕಾರುಗಳೆರಡು ಪರಸ್ವರ ಡಿಕ್ಕಿಹೊಡೆದುಕೊಂಡು ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ಸುಳ್ಯ ಸಮೀಪದ ಆಲೆಟ್ಟಿ ಗ್ರಾಮದ ಪಾಲಡ್ಕ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಫೆ.19 ರಂದು ನಡೆದಿದೆ.

Advertisement

ಸುಳ್ಯ ಕಡೆಯಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಕಾರು ಹಾಗೂ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಚಲಿಸುತ್ತಿದ್ದ ಕಾರುಗಳ ನಡುವೆ ಡಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಎರಡು ಕಾರಿನಲ್ಲಿದ್ದವರಿಗೂ ಗಾಯಗಳಾಗಿವೆ. ಕೆಲವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿದ್ದರೆ, ಇನ್ನುಳಿದವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ರಾಂಬನ್‌ನಲ್ಲಿ ಭಾರೀ ಭೂಕುಸಿತ; ಹತ್ತಾರು ಮನೆಗಳಿಗೆ ಹಾನಿ, 13 ಕುಟುಂಬಗಳ ಸ್ಥಳಾಂತರ

Advertisement
Advertisement

Udayavani is now on Telegram. Click here to join our channel and stay updated with the latest news.

Next