ಕುಂದಾಪುರ: ಮತದಾನ ಮಾಡಲೆಂದು ತಮ್ಮ ಮನೆಯಿಂದ ಮತಗಟ್ಟೆಗೆ ನಡೆದುಕೊಂಡು ಬರುತ್ತಿದ್ದ ಮಹಿಳೆಯೊಬ್ಬರಿಗೆ ಕಾರು ಢಿಕ್ಕಿಯಾಗಿ, ಗಂಭೀರ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಕೆರಾಡಿಯಲ್ಲಿ ಸಂಭವಿಸಿದೆ.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರಾಡಿ ಗ್ರಾಮದ ಕುಳ್ಳಂಬಳ್ಳಿ ನಿವಾಸಿ ಸುಶೀಲಾ ಪೂಜಾರಿ (62) ಸಾವನ್ನಪ್ಪಿದವರು.
ಅವರು ಕುಳ್ಳಂಬಳ್ಳಿಯ ತಮ್ಮ ಮನೆಯಿಂದ ಸಹೋದರಿ ನಾಗರತ್ನಾ ಅವರೊಂದಿಗೆ ಮತದಾನದ ಮೂಲಕ ತಮ್ಮ ಹಕ್ಕನ್ನು ಚಲಾಯಿಸಲು ನಡೆದುಕೊಂಡು ಬರುತ್ತಿದ್ದಾಗ ಕಾರೊಂದು ಢಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಂಗಳೂರು: ಮಿಥುನ್ ರೈ ಕಾರು ಗುರಿಯಾಗಿಸಿ ಕಲ್ಲು ತೂರಾಟ