Advertisement

Hunasur: ಪತ್ನಿ ಮನೆಗೆ ಹೋಗಿ ಹಿಂತಿರುಗುವ ವೇಳೆ ರಸ್ತೆ ಅಪಘಾತ… ಪತಿ ಮೃತ್ಯು

07:38 PM Jun 26, 2024 | Team Udayavani |

ಹುಣಸೂರು: ಸಾರಿಗೆ ಸಂಸ್ಥೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೆದ್ದಾರಿಯ ನಾಗಮಂಗಲ ಗೇಟ್ ಬಳಿ ನಡೆದಿದೆ.

Advertisement

ಹುಣಸೂರು ತಾಲೂಕಿನ ಕಿರುಬರ ಹೊಸಹಳ್ಳಿಯ ರವಿ ಅವರ ಪುತ್ರ ಮಂಜು (26) ಮೃತಪಟ್ಟವರು. ಮೃತರು ತಂದೆ, ತಾಯಿ, ಪತ್ನಿ ಮತ್ತು 3 ತಿಂಗಳ ಮಗುವನ್ನು ಅಗಲಿದ್ದಾರೆ.

ಆಗಿರೋದಿಷ್ಟು:
ಪತ್ನಿ ಮನೆ ಪಿರಿಯಾಪಟ್ಟಣಕ್ಕೆ ತೆರಳಿ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದ ವೇಳೆ ವಾಹನ ಹಿಂದಿಕ್ಕುವ ಭರದಲ್ಲಿ ಹುಣಸೂರು ಕಡೆಯಿಂದ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಗೆ ಡಿಕ್ಕಿಹೊಡೆದ ಪರಿಣಾಮ ತಲೆ. ಕೈಕಾಲಗಳಿಗೆ ತೀವ್ರಗಾಯವಾಗಿ ಮಂಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಗ್ರಾಮಾಂತರ ಠಾಣೆ ಪೊಲೀಸರು ಶವವನ್ನು ಶವಾಗಾರಕ್ಕೆ ಸಾಗಿಸಿ‌ ಬಸ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಇನ್ಸ್ ಪೆಕ್ಟರ್ ಮುನಿಸ್ವಾಮಿ.ಹುಣಸೂರು ಡಿಪೋ ವ್ಯವಸ್ಥಾಪಕ ಸುಬ್ರಮಣ್ಯ ಭೇಟಿ ಇತ್ತು ಪರಿಶೀಲಿಸಿದರು.

ಇದನ್ನೂ ಓದಿ: Heavy Rain: ಭಾರಿ ಮಳೆ… ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ನಾಳೆ ರಜೆ…

Advertisement
Advertisement

Udayavani is now on Telegram. Click here to join our channel and stay updated with the latest news.

Next