ಗಂಗೊಳ್ಳಿ: ಆಟೋ ರಿಕ್ಷಾ ತೆಂಗಿನ ಮರಕ್ಕೆ ಢಿಕ್ಕಿಯಾಗಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಕುಂದಾಪುರದ ನಿವಾಸಿ ಭಾಸ್ಕರ (33) ಅವರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಮೇ 28ರಂದು ರಾತ್ರಿ 9.45ರ ಸುಮಾರಿಗೆ ತ್ರಾಸಿ- ಮೊವಾಡಿ ರಸ್ತೆಯಲ್ಲಿ ಸಂಭವಿಸಿದೆ.
ಗುರುರಾಜ ಪೂಜಾರಿ ರಿಕ್ಷಾ ಚಾಲಕರಾಗಿದ್ದು, ವೇಗವಾಗಿ ಬಂದು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ತೆಂಗಿನ ಮರಕ್ಕೆ ಢಿಕ್ಕಿಯಾಗಿದೆ. ರಿಕ್ಷಾದಲ್ಲಿ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಭಾಸ್ಕರ ಅವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯರಾದ ಆಲ್ಟನ್, ಶಬರೀಶ ದೇವಾಡಿಗ, ವಿವೇಕಾನಂದ ಪೂಜಾರಿ ಅವರು ಉಪಚರಿಸಿ, ಆ್ಯಂಬುಲೆನ್ಸ್‌ನಲ್ಲಿ ಕುಂದಾಪುರದ ಆಸ್ಪತ್ರೆಗೆ ಕರೆತಂದಿದ್ದಾರೆ.
ಆದರೆ ಅಷ್ಟರಲ್ಲಿ ಸಾವನ್ನಪ್ಪಿರು ವುದಾಗಿ ವೈದ್ಯರು ತಿಳಿಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.