Advertisement

ಚಿತ್ರದುರ್ಗ ಬಳಿ ಭೀಕರ ಅಪಘಾತ: ಮೃತರು ಬೆಂಗಳೂರು ಮೂಲದವರು, ಗೋವಾಕ್ಕೆ ಹೊರಟಿದ್ದ ಕುಟುಂಬ

02:42 PM Jun 15, 2024 | Team Udayavani |

ಭರಮಸಾಗರ: ರಾಷ್ಟ್ರೀಯ ಹೆದ್ದಾರಿ 48 ರ ಚಿಕ್ಕಬೆನ್ನೂರು ಬಳಿ ನಡೆದ ಕಾರು ಮತ್ತು ಲಾರಿ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಪೃತಪಟ್ಟಿದ್ದು ಮೃತಪಟ್ಟವರು ಬೆಂಗಳೂರು ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಪ್ರಜ್ವಲ್ ರೆಡ್ಡಿ (30) , ಹರ್ಷಿತ (28) ಮತ್ತು ಎರಡು ವರ್ಷದ ಮಗು ಸೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತ್ತ ಶಿಲ್ಪಾ, ಸ್ವರ್ಣ ಜಾಜ್೯, ಮಧುಮಿಥಾ, ವಿಜಯ್ ರೆಡ್ಡಿ, ಶಿಚಿಕೃಷ್ಣ ಎಂಬುವರೇ ಕಾರಿನಲ್ಲಿದ್ದ ಐವರು. ಇವರು ತೀವ್ರ ಗಾಯಗೊಂಡಿದ್ದಾರೆ. ಇವರನ್ನು ದಾವಣಗೆರೆ ಎಸ್ ಎಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.

ಬೆಂಗಳೂರಿನಿಂದ ಗೋವಾಕ್ಕೆ ಈ ಕುಟುಂಬ ಫಾರ್ಚುನರ್ ಕಾರಿನಲ್ಲಿ ಪ್ರವಾಸಕ್ಕೆ ಎಂದು ತೆರಳುತ್ತಿತ್ತು. ಚಿಕ್ಕಬೆನ್ನೂರು ಬಳಿ ತೆರಳುವಾಗ ದಾವಣಗೆರೆ ಕಡೆ ಸಂಚರಿಸುತ್ತಿದ್ದ ಲಾರಿ ಟಾಯರ್ ಬ್ಲಾಸ್ಟ್ ಆಗಿದ್ದರಿಂದ ಲಾರಿಯ ಹಿಂಬದಿ ಬಂದ ಕಾರು ಏಕಾಏಕಿ ಲಾರಿ ಮೇಲೆ ಹರಿದು ಚಾಲಕನ ನಿಯಂತ್ರಣಕ್ಕೆ ಸಿಗದ ಕಾರು ಕೊನೆಗೆ ಹೈವೇ ರಸ್ತೆ ತಡೆಗೋಡೆಗೆ ಗುದ್ದಿದೆ. ಅಪಘಾತ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಚಿಕ್ಕಬೆನ್ನೂರು ಬಳಿ ಹೈವೇ ರಸ್ತೆ ಹೊಸದಾಗಿ ನಿರ್ಮಾಣ ಆದ ಬಳಿಕ ಅಪಘಾತಗಳು ತಗ್ಗಿತ್ತು. ಶನಿವಾರ ಸಂಭವಿಸಿದ ಅಪಘಾತ ಕಳೆದ ಕೆಲ ವರ್ಷಗಳಲ್ಲೇ ಅತಿಘೋರ ದುರಂತ ಎನ್ನಲಾಗಿದೆ.

ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಇದನ್ನೂ ಓದಿ: Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 8 ಮಂದಿ ನಕ್ಸಲರು ಹತ, ಓರ್ವ ಯೋಧ ಹುತಾತ್ಮ

Advertisement

Udayavani is now on Telegram. Click here to join our channel and stay updated with the latest news.

Next