Advertisement

ಬೆಂಗಳೂರಿನಲ್ಲಿ ಅಪಘಾತ : ಸೈಕಲ್‌ ಸವಾರ ಬಂಟ್ವಾಳದ ಯುವಕ ಮೃತ್ಯು

01:17 AM Jun 26, 2022 | Team Udayavani |

ಬಂಟ್ವಾಳ : ಬೆಂಗಳೂರಿನ ಯಲಹಂಕದಲ್ಲಿ ಸೈಕಲಿಗೆ ಹಿಂದಿನಿಂದ ಕಾರು ಢಿಕ್ಕಿಯಾಗಿ ಸೈಕಲ್‌ ಸವಾರ ಬಂಟ್ವಾಳ ಮೂಲದ ಯುವಕ ಮೃತಪಟ್ಟ ಘಟನೆ ಜೂ. 24ರಂದು ನಡೆದಿದೆ.

Advertisement

ಬಂಟ್ವಾಳ ಕಾಮಾಜೆ ನಿವಾಸಿ ಶಿವಪ್ರಸಾದ್ (33) ಮೃತಪಟ್ಟ ಯುವಕ. ಬೆಂಗಳೂರಿನ ಎì ಫೋಸ್ನìಲ್ಲಿ ಎಸಿ ಟೆಕ್ನೀಷಿಯನ್‌ ಆಗಿದ್ದ ಶಿವಪ್ರಸಾದ್‌ ಅವರು ತನ್ನ ಕಾಟ್ರಸ್‌ ನಿಂದ 250 ಮೀ.ದೂರದಲ್ಲಿರುವ ಕಚೇರಿಗೆ ಹೋಗುವ ವೇಳೆ ಸೈಕಲ್‌ ಗೆ ಹಿಂದಿನಿಂದ ಮಹಿಳೆ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಈ ವೇಳೆ ಶಿವಪ್ರಸಾದ್‌ ಅವರು ಡಿವೈರ್ಡ ಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರಿಗೆ ನಾಲ್ಕೆçದು ವರ್ಷಗಳ ಹಿಂದೆ ಏì ಪೋರ್ಸ್‌ ನಲ್ಲಿ ಉದ್ಯೋಗ ಲಭಿಸಿತ್ತು. ಮೂಲತಃ ರಾಯಿಯಲ್ಲಿ ವಾಸವಿದ್ದ ಅವರ ಕುಟುಂಬ ಬಳಿಕ ಕಳೆದ 10 ವರ್ಷಗಳಿಂದ ಕಾಮಾಜೆಯಲ್ಲಿ ನೆಲೆಸಿತ್ತು. ಕಳೆದ 5 ತಿಂಗಳ ಹಿಂದೆಯಷ್ಟೇ ಅವರಿಗೆ ವಿವಾಹವಾಗಿತ್ತು. ಶಿವಪ್ರಸಾದ್‌ ಅವರ ಮೃತದೇಹವನ್ನು ಊರಿಗೆ ತಂದು ಶನಿವಾರ ಬಂಟ್ವಾಳದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next