ಒಡಿಶಾ: ಯಾತ್ರಾತ್ರಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ನಾಲ್ವರು ಯಾತ್ರಾರ್ಥಿಗಳು ಮೃತಪಟ್ಟು ಮೂವತ್ತು ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಉತ್ತರ ಪ್ರದೇಶ ಮೂಲದ ರಾಜೇಶ್ ಮಿಶ್ರಾ, ಶಾಂತಾರಾಮ್ ಯಾದವ್, ಕಮಲಾ ದೇವಿ ಯಾದವ್ ಮತ್ತು ರಾಜಪ್ರಸಾದ್ ಯಾದವ್ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶ ಮೂಲದ ಪ್ರವಾಸಿಗರನ್ನು ಪುರಿ ಜಗನ್ನಾಥ ದೇವಾಲಯಕ್ಕೆ ಕರೆದೊಯ್ಯುತ್ತಿದ್ದ ವೇಳೆ ಶುಕ್ರವಾರ ತಡರಾತ್ರಿ ಬಸ್ ರಾಷ್ಟ್ರೀಯ ಹೆದ್ದಾರಿ-60 ರಲ್ಲಿ ಮಹಮದ್‌ನಗರ ಪಾಟ್ನಾ ಬಳಿ ರಸ್ತೆಯಿಂದ ಆಯತಪ್ಪಿ ಭತ್ತದ ಗದ್ದೆಗೆ ಉರುಳಿದೆ ಪರಿಣಾಮ ನಾಲ್ವರು ಗಂಭೀರ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಜಲೇಶ್ವರದ ಜಿ ಕೆ ಭಟ್ಟರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ 17 ಜನರ ಸ್ಥಿತಿ ಗಂಭೀರವಾಗಿದ್ದ ಪರಿಣಾಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಲಸೋರ್‌ನ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ರವಾನಿಸಲಾಗಿದೆ.
ಸಪ್ಟೆಂಬರ್ 18 ರಂದು ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಸುಮಾರು 57 ಪ್ರಯಾಣಿಕರನ್ನು ಹೊತ್ತ ಬಸ್ಸು ವಾರಣಾಸಿ, ಗಯಾ, ಗಂಗಾ ಸಾಗರ್ ಮತ್ತು ಕೋಲ್ಕತ್ತಾ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಪುರಿಗೆ ಹೋಗುತ್ತಿತ್ತು ಈವೇಳೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ರಂಜನ್ ಕುಮಾರ್ ಸೇಥಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Mangaluru: ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ BMW ಕಾರು… ಪ್ರಯಾಣಿಕರು ಪಾರು