Advertisement

ಭಾರತ ‘ವಿಶ್ವಗುರು’ ಆಗುವ ಹಾದಿ ಸಾರ್ಕ್ ಮೂಲಕವೇ ಹೊರತು ಜಿ-20ಯಿಂದಲ್ಲ : ಮುಫ್ತಿ

07:26 PM May 14, 2023 | Team Udayavani |

ಹೊಸದಿಲ್ಲಿ: ಮುಂಬರುವ ಜಿ-20 ಸಭೆಯು ಬಿಜೆಪಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ “ಉತ್ತಮ ಪ್ರಚಾರದ ತಾಲೀಮು” ಆಗಿರಬಹುದು. ಸಾರ್ಕ್ ಶೃಂಗಸಭೆಯನ್ನು ನಡೆಸುವುದರಿಂದ ಈ ಪ್ರದೇಶದಲ್ಲಿನ ಸಮಸ್ಯೆಗಳನ್ನು ಚರ್ಚಿಸುವುದಕ್ಕೆ ಮತ್ತು ಭಾರತವನ್ನು ‘ವಿಶ್ವಗುರು’ ವನ್ನಾಗಿಸಲು ಸಹಾಯ ಮಾಡುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

Advertisement

ಮೇ 22 ರಿಂದ 24 ರವರೆಗೆ ಶ್ರೀನಗರದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಜಿ-20 ಗುಂಪು ಸಭೆಯ ಸಿದ್ಧತೆಗಳ ಕುರಿತು ಮೆಹಬೂಬಾ ಪಿಟಿಐ-ವಿಡಿಯೋದೊಂದಿಗೆ ಮಾತನಾಡುತ್ತಾ, “ನಾವು ಜಿ-20 ಸದಸ್ಯರಾಗಿರುವ ಆಸ್ಟ್ರೇಲಿಯಾ, ಅಮೆರಿಕ ಅಥವಾ ಜಪಾನ್‌ಗೆ ಹತ್ತಿರದಲ್ಲಿ ವಾಸಿಸುತ್ತಿಲ್ಲ. ನಾವು ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ ಮತ್ತು ಸಾರ್ಕ್ ಈ ಪ್ರದೇಶದ ಸಮಸ್ಯೆಗಳನ್ನು ಪೂರೈಸುತ್ತದೆ ಮತ್ತು ಸರ್ಕಾರವು ಉಪಕ್ರಮವನ್ನು ತೆಗೆದುಕೊಂಡರೆ, ಸಾರ್ಕ್ ರಾಷ್ಟ್ರಗಳ ಶೃಂಗಸಭೆಯನ್ನು ನಡೆಸಿದರೆ, ಪಾಕಿಸ್ಥಾನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಒಳಗೊಂಡಂತೆ ಈ ಪ್ರದೇಶವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿದರೆ ಪ್ರದೇಶ ಮತ್ತು ವಿಶ್ವದಲ್ಲಿ ಭಾರತ ನಾಯಕನಾಗಲು ಸಹಾಯ ಮಾಡಬಹುದು ಎಂದು ಹೇಳಿದರು.

ಸರ್ಕಾರವು “ಸಾರ್ಕ್ ಮೂಲಕ ಆಗುತ್ತದೆಯೇ ಹೊರತು ಜಿ-20 ಮೂಲಕ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಪಿಡಿಪಿ ಮುಖ್ಯಸ್ಥೆ ಹೇಳಿದ್ದಾರೆ.

”ಜಿ-20ಗೆ ಸಂಬಂಧಿಸಿ ಸಭೆಯನ್ನು ಬಿಜೆಪಿ ಕಾರ್ಯಕ್ರಮವನ್ನಾಗಿ ಮಾಡಲಾಗಿದೆ ಏಕೆಂದರೆ ಲೋಗೋದಲ್ಲಿ ಸಹ ಕಮಲವಿದೆ. ಇದು ಪಕ್ಷಕ್ಕೆ ಒಂದು ರೀತಿಯ ಉತ್ತಮ ಪ್ರಚಾರವಾಗಬಹುದು.ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ, ವಿಶೇಷವಾಗಿ ಕಣಿವೆಯಲ್ಲಿ ದಬ್ಬಾಳಿಕೆ ನಡೆಯುತ್ತಿರುವ ರೀತಿಯನ್ನು ನೀವು ನೋಡಿದ್ದೀರಿ…”ಎಂದು ಅವರು ಹೇಳಿದರು.

ಆಗಸ್ಟ್ 2019 ರಲ್ಲಿ ಆರ್ಟಿಕಲ್ 370 ರದ್ದತಿ ಮತ್ತು ಹಿಂದಿನ ರಾಜ್ಯ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಅನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ G-20 ಕಾರ್ಯಕ್ರಮವು ಕಾಶ್ಮೀರದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಸಭೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next