Advertisement
ರಸ್ತೆ ಕಾಮಗಾರಿ ಆರಂಭವಾಗಿ 5 ತಿಂಗಳು ಕಳೆಯುತ್ತಿದ್ದರೂ ಕೂಡ ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
Related Articles
Advertisement
ಕುಡುಕರ ಕಾಟಬಸ್ ತಂಗುದಾಣದಲ್ಲಿ ಕುಡುಕರು ರಾತ್ರಿ ವೇಳೆ ಮಲಗುತ್ತಿದ್ದು, ಇದೂ ಕೂಡ ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಂಬಂಧ ಪೊಲೀಸ್ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಒತ್ತಾಯ. 5 ತಿಂಗಳಿನಿಂದ ಕತ್ತಲು!
ಹೆದ್ದಾರಿ ವಿಸ್ತರಣೆ ಕಾಮಗಾರಿ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ಸಮಸ್ಯೆ ಸಾರ್ವ ಜನಿಕರನ್ನು ಕಾಡುತ್ತಿದೆ. ಹಗಲು ಹೊತ್ತು ಬ್ಲಾಕ್, ರಾತ್ರಿ ವೇಳೆ ಕತ್ತಲು ಇರುವುದರಿಂದ ಸವಾರರು ಸಹಿತ ಪಾದಚಾರಿಗಳು ಇತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಮೊಬೈಲ್ ಲೈಟೇ ಆಧಾರ
ರಾತ್ರಿ 12ರಿಂದ 1 ಗಂಟೆವರೆಗೂ ಇಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಓಡಾಡುತ್ತಾರೆ. ಮೊಬೈಲ್ ಲೈಟ್ ಹಾಕಿಯೇ ಹೆಚ್ಚಿನ ವಿದ್ಯಾರ್ಥಿಗಳು ನಡೆದು ಹೋಗುತ್ತಾರೆ. ನಗರ ಸಭೆ ಶೀಘ್ರ ಸರಿಪಡಿಸಲಿ.
-ರಾಘವೇಂದ್ರ, ಸ್ಥಳೀಯ ವ್ಯಾಪಾರಸ್ಥರು ಕ್ರಮ ಅಗತ್ಯ
ಹೆದ್ದಾರಿ ಕಾಮಗಾರಿ ಆರಂಭವಾದಾಗಿನಿಂದ ಇಲ್ಲಿನ ಬೀದಿ ದೀಪಗಳನ್ನು ತೆಗೆಯಲಾಗಿದೆ. ನಗರಸಭೆ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು.
-ಮಂಜುನಾಥ್, ಎಂಜಿನಿಯರ್, ಹೆದ್ದಾರಿ ಇಲಾಖೆ ಹೆದ್ದಾರಿ ಕಾಮಗಾರಿ ಬಳಿಕ ಅಳವಡಿಕೆ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಈಗ ಇರುವ ಡಿವೈಡರ್ ಬದಲಿಸುವ ಕಾರಣ ಬೀದಿದೀಪಗಳನ್ನು ತೆಗೆಯಲಾಗಿದೆ. ಕಾಮಗಾರಿ ಮುಗಿದ ಅನಂತರ ಬೀದಿದೀಪಗಳನ್ನು ಅಳವಡಿಸಲಾಗುವುದು.
-ಆನಂದ್ ಕೆ., ಪೌರಾಯುಕ್ತರು, ಉಡುಪಿ ನಗರಸಭೆ ಪ್ರಯಾಣಿಕರಿಗೆ ಸಂಕಷ್ಟ
ಬೇರೆ ಊರುಗಳಿಗೆ ಪ್ರಯಾಣಿಸುವ ಹಲವಾರು ಪ್ರಯಾಣಿಕರು ಇಲ್ಲಿನ ಬಸ್ಸು ತಂಗುದಾಣಗಳಲ್ಲಿ ನಿಲ್ಲುತ್ತಾರೆ. ಸೂಕ್ತ ಬೀದಿದೀಪಗಳು ಇಲ್ಲದ ಕಾರಣ ಹಲವಾರು ಮಂದಿ ಸಮಸ್ಯೆ ಅನುಭವಿಸುವುದನ್ನು ದಿನನಿತ್ಯ ನೋಡುತ್ತಿದ್ದೇವೆ. ಅಭಿವೃದ್ಧಿ ನಿಟ್ಟಿನಲ್ಲಿ ಕತ್ತಲ ಭಾಗ್ಯ ಕರುಣಿಸಿದಂತಿದೆ.
-ಜೋಸೆಫ್, ಬಸ್ಸು ಚಾಲಕರು