Advertisement

ಕಲಬುರಗಿಯಲ್ಲಿ ರಸ್ತೆ ಒತ್ತುವರಿ ಕಾರ್ಯಾಚರಣೆ: ಮಾತಿನ ಚಕಮಕಿ

02:48 PM May 19, 2022 | Team Udayavani |

ಕಲಬುರಗಿ: ನಗರದಲ್ಲಿ ಇತ್ತೀಚೆಗೆ ರಸ್ತೆ, ಫುಟಪಾತ್ ಅತಿಕ್ರಮಣ ಹಾಗೂ ಒತ್ತುವರಿ ಹೆಚ್ಚಾಗುತ್ತಿರುವುದನ್ನು ಮನಗಂಡಿರುವ ಪಾಲಿಕೆ ಅಧಿಕಾರಿಗಳು ಈಗ ತೆರವಿಗೆ ಮುಂದಾಗಿದ್ದಾರೆ.

Advertisement

ನಗರದ ರಾಮಮಂದಿರ ವೃತ್ತದ ಬಳಿ ರಸ್ತೆ ಅತಿಕ್ರಮಿಸಿದ್ದ ಗೂಡಂಗಡಿಗಳನ್ನು ಬುಲ್ಡೋಜರ್‌ದಿಂದ ತೆರವುಗೊಳಿಸಲಾಯಿತು.

ಈ ಮೊದಲು ನೊಟೀಸ್ ನೀಡಿ ತೆರವುಗೊಳಿಸಲಾಗಿದ್ದರೂ ಮತ್ತೆ ಗೂಡಂಗಡಿ ಹಾಕಿದ್ದರಿಂದ ಪಾಲಿಕೆ ಅಧಿಕಾರಿಗಳು ಪೊಲೀಸ್ ಸಮ್ಮುಖದಲ್ಲಿ ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ವ್ಯಾಪಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ವ್ಯಾಪಾರಿಗಳು ಇನ್ನೊಂದಿಷ್ಟು ಸಮಯ ಕೊಡಬೇಕಿತ್ತು ಎಂದು ಹೇಳಿದರು.

ಈ ಹಿಂದೆ ತೆರವುಗೊಳಿಸಲಾಗಿ ಮತ್ತೆ ಒಳಚರಂಡಿ ಹಾಗೂ ರಸ್ತೆ ಮೇಲೆ ಗೂಡಂಗಡಿ ಹಾಕಿರುವುದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಮಯ ನೀಡುವ ಪ್ರಮೆಯ ಎದುರಾಗುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಸಮಜಾಯಿಷಿ ನೀಡಿದರು.

Advertisement

ಕಾರ್ಯಾಚರಣೆ ಮುಂದುವರಿಕೆ: ರಾಮ ಮಂದಿರವಲ್ಲದೇ ಇತರ ರಸ್ತೆಗಳಲ್ಲೂ ರಸ್ತೆ ಹಾಗೂ ಒಳಚರಂಡಿ ಅತಿಕ್ರಮಣ ಆಗಿರುವ ತೆರವು ಕಾರ್ಯಾಚರಣೆ ಪಾಲಿಕೆ ಆಯುಕ್ತರ ನಿರ್ದೇಶನ ಮೇರೆಗೆ ಕೈಗೊಳ್ಳಲಾಗಿದೆ. ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಇಂಜಿನಿಯರುಗಳಾದ ಸುಧೀರ ಮೇತ್ರೆ ಹಾಗೂ ಪ್ರಭಾಕರ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next