Advertisement

ಅರಮನೆ ಬಾಗಿಲು-ಕೊಂಡೆ ಬೀದಿ ಚರಂಡಿ ದುಃಸಿತ್ಥಿ

11:32 AM Oct 07, 2022 | Team Udayavani |

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಅರಮನೆ ಬಾಗಿಲು ಕಡೆಯಿಂದ ಕೊಂಡೆ ಬೀದಿಯಾಗಿ ರಾ.ಹೆ. 169 ತಲುಪುವಲ್ಲಿಯ ಮಾರ್ಗ ದುದ್ದಕ್ಕೂ ಚರಂಡಿ ದುರಾವಸ್ಥೆ ತೀವ್ರ ಮಳೆ ಬಿದ್ದಾಗ ಎದ್ದು ಕಾಣಿಸುತ್ತಿದೆ. ರಾ.ಹೆ.ಯ ಒತ್ತಡದಿಂದ ಪಾರಾಗಲು ಮೂಡುಬಿದಿರೆ ಪೇಟೆಯ ಹನುಮಂತ ದೇವಸ್ಥಾನದ ಬಳಿಯಿಂದ, ಅತ್ತ ನಾಗರಕಟ್ಟೆ ಪ್ರದೇಶದಿಂದ ಒಳ ಮಾರ್ಗವಾಗಿ ಸಾಗಲು ಅತ್ಯಂತ ಉಪಯುಕ್ತ ರಸ್ತೆ ಇದಾಗಿದೆ. ಹೀಗಿರುತ್ತ ಈ ರಸ್ತೆಯ ಸ್ಥಿತಿಗತಿ ನೋಡಿದರೆ ಅಯ್ಯೋ ಎನಿಸುತ್ತಿದೆ.

Advertisement

ಅರಮನೆ ಬಾಗಿಲು ಎಂಬ ದ್ವಾರದ ಬದಿ ಯಿಂದ ಹತ್ತಾರು ಹೆಜ್ಜೆ ಹಾಕುವಷ್ಟರಲ್ಲಿ ರಸ್ತೆಯಲ್ಲಿ ಬಿದ್ದಿರುವ ಹೊಂಡದಲ್ಲಿ ಮಳೆ ನೀರು ತುಂಬಿಕೊಂಡಾಗ ಹೊಂಡ ಇರುವುದೇ ಗೋಚರಿಸದೆ ವಾಹನ ಸವಾರರು ಅಪಾಯ ಎದುರಿಸಬೇಕಾಗಿದೆ.

ಮಳೆ ಸುರಿದಾಗ ಚರಂಡಿಯ ವ್ಯವಸ್ಥೆ ಇಲ್ಲದೆ ಮಾರ್ಗದಲ್ಲಿಯೇ ನೀರು ನಿಂತು ನೀರಿನ ಮೇಲೆ ವಾಹನ ಸಾಗಿದಾಗ ಬದಿಯಲ್ಲಿ ನಡೆದು ಕೊಂಡು ಹೋಗುವವರಿಗೆ ಕೆಂಪುನೀರಿನ ಅಭಿಷೇಕವಾಗುವುದು. ಮುಂದೆ ಸಾಗಿದಾಗಲೂ ಚರಂಡಿ ಸಮರ್ಪಕ ವಾಗಿಲ್ಲದಿರುವುದು ಕಾಣಿಸುತ್ತದೆ.

ಕಟ್ಟೆಯ ಬಳಿಕ ಪೂರ್ವಾಭಿಮುಖವಾಗಿ ಸಾಗುವ ಕೊಂಡೆ ಬೀದಿಯ ಎಡಕ್ಕೆ ಚರಂಡಿಯೇ ಇಲ್ಲ. ಈ ಪ್ರದೇಶದಲ್ಲಿ ಸುಶಿಕ್ಷಿತರು, ಗಣ್ಯರು ವಾಸವಾಗಿದ್ದಾರೆ. ಈ ಭಾಗದ ಮನೆಗಳ ಅಂಗಳದಿಂದ ಹೊರ ಸೂಸುವ ಮಳೆ ನೀರು ನೇರ ರಸ್ತೆಯ ಮೂಲಕ ಅಡ್ಡ ಹಾದು, ಕೆಲವೆಡೆ ಆಲ್ಲಲ್ಲಿಯೇ ರಸ್ತೆಯಲ್ಲಿ ನಿಂತು ಸಮಸ್ಯೆ ಉಂಟಾಗುತ್ತಿದೆ. ಮನೆಗಳ ಅಂಗಳದ ಹೊರಭಾಗದಲ್ಲಿ ಸೂಕ್ತವಾಗಿ ಮೋರಿ ರಚನೆ ಮಾಡಿದರೆ, ಅಂಗಳಗಳಿಂದ ಹೊರಸೂಸಲ್ಪಡುವ ಮಳೆ ನೀರು ಚರಂಡಿಯ ಮೂಲಕ ಹರಿಯಲು ಸಾಧ್ಯವಿದೆ. ಪುರಸಭೆ ಈ ಬಗ್ಗೆ ಗಮನ ಹರಿಸಬೇಕಾಗಿದೆ.

ಚರಂಡಿ ಅವ್ಯವಸ್ಥೆ ಬಗ್ಗೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರಗಿಸಲಾಗುವುದು. ಜನರಿಗೆ ಮೂಲ ಸೌಕರ್ಯ ಒದಗಿಸಲು ಪುರಸಭೆ ಸದಾ ಬದ್ಧ –ಪ್ರಸಾದ್‌ ಕುಮಾರ್‌, ಪುರಸಭಾ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next