ಸಚಿವರಿಗೆ ರಸ್ತೆಯಲ್ಲಿ ತಡೆ: ವೈಶಾಖ್
Team Udayavani, Sep 14, 2020, 6:03 PM IST
ಕಾಸರಗೋಡು: ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ಅವರ ರಾಜೀನಾಮೆ ಕೇಳದಿರುವುದನ್ನು ಪ್ರತಿಭಟಿಸಿ ಕೇರಳದ ಎಲ್ಲ ಸಚಿವರನ್ನು ರಸ್ತೆಯಲ್ಲಿ ತಡೆಯುವುದಾಗಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈಶಾಖ್ ಕೋಳ್ಳೋತ್ ಹೇಳಿದರು.
ಯುವ ಮೋರ್ಚಾ ಉದುಮ ಮಂಡಲ ಸಮಿತಿ ನೇತೃತ್ವದಲ್ಲಿ ಕೆ.ಟಿ. ಜಲೀಲ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪೊಯಿನಾಚಿಯಲ್ಲಿ ನಡೆದ ರಸ್ತೆ ತಡೆ ಚಳವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಮೋರ್ಚಾ ಮಂಡಲ ಅಧ್ಯಕ್ಷ ಮಹೇಶ್ ಗೋಪಾಲ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವೈ. ಕೃಷ್ಣದಾಸ್, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸಾಗರ್ ಚಾತಮತ್ತ್, ಉದುಮ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಮಧುಸೂದನನ್ ಅಡ್ಕತ್ತಬೈಲು ಮೊದಲಾದವರು ಮಾತನಾಡಿದರು.
ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್, ಒಬಿಸಿ ಮೋರ್ಚಾ ಉದುಮ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ. ಕೂಟ್ಟಕಣಿ, ಕೋಶಾಧಿಕಾರಿ ದಿನೇಶನ್ ಞಕ್ಲಿ ಮೊದಲಾದವರು ನೇತೃತ್ವ ವಹಿಸಿದ್ದರು.