Advertisement

ಸವದತ್ತಿ: ವೀಕೆಂಡ್ ಕರ್ಫ್ಯೂ ಅರಿಯದ ಬೀದಿ ವ್ಯಾಪಾರಿಗಳಿಂದ ರಸ್ತೆ ತಡೆ, ಪ್ರತಿಭಟನೆ

07:30 PM Jan 15, 2022 | Team Udayavani |

ಸವದತ್ತಿ: ವಾರಾಂತ್ಯದ ನಿಷೇದಾಜ್ಞೆ ಅರಿಯದ ಯಲ್ಲಮ್ಮ ದೇವಸ್ಥಾನದ ಕೆಲ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಸಣ್ಣ ಅಂಗಡಿಕಾರರು ಶನಿವಾರ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಅಂಗಡಿ ಮುಗ್ಗಟ್ಟು ಬಂದ್ ಮಾಡಿಸಿದ್ದನ್ನು ಖಂಡಿಸಿ ಕೆಲವೇಳೆ ರಸ್ತೆ ತಡೆದು ಪ್ರತಿಭಟಿಸಿದ ಘಟನೆ ಜರುಗಿದೆ.

Advertisement

ಜೀವನೋಪಾಯಕ್ಕಾಗಿ ಅಮ್ಮನ ಸನ್ನಿಧಿಯೇ ಆಸರೆ. ಇದೀಗ ನಿರ್ಭಂದದಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ದೇವಸ್ಥಾನ ಬಂದ್ ಇದ್ದರೂ ಭಕ್ತರ ಆಗಮನ ನಿಂತಿಲ್ಲ. ಕಳೆದ ವರ್ಷ ರಾಮಾರೂಢ ಮಠದ ಹತ್ತಿರ ಅಂಗಡಿ ಇಟ್ಟು ಒಪ್ಪತ್ತಿನ ಊಟಕ್ಕೆ ದಾರಿಮಾಡಿಕೊಂಡಿದ್ದೆವು. ಈ ಬಾರಿ ಇಲ್ಲಿ ಅಂಗಡಿ ತೆರೆಯದಿರಲು ತಿಳಿಸಿದ್ದಾರೆ. ಇದರಿಂದ ದಿಕ್ಕು ತೋಚದಂತಾಗಿದೆ.

ಜೋಗುಳಬಾವಿಯ ಸುತ್ತ ಮತ್ತು ರಸ್ತೆ ಮೇಲೆ ವ್ಯಾಪಾರ ನಡೆಸಲು ಅನುಕೂಲವಿದೆ. ಅದರಂತೆ ಇಲ್ಲಿಯೂ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಬೇಕು. ಇಲ್ಲವಾದರೆ ಹೊಟ್ಟೆ ಪಾಡಿಗೆ ಹೋರಾಟ ನಡೆಸುವದು ಅನಿವಾರ್ಯವಾದೀತು. ರಾಜಕಾರಣಿಗಳೇ ಕೋವಿಡ್ ನಿಯಮ ಉಲ್ಲಂಘಿಸಿ, ಲಕ್ಷಾಂತರ ಜನ ಸೇರಿಸಿ ರಾಜಕೀಯ ಮಾಡುತ್ತಿದ್ದಾರೆ. ಇವರಿಗಿಲ್ಲದ ನಿಯಮಗಳು ದುಡಿಯುವ ಕೈಗಳಿಗೇಕೆ ? ಹೊಟ್ಟೆಪಾಡಿಗಾಗಿ ವ್ಯಾಪಾರ ನಡೆಸಿದರೆ ತೆರವುಗೊಳಿಸುತ್ತಿದ್ದಾರೆಂದು ವ್ಯಾಪಾರಸ್ಥರು ಆಗ್ರಹಿಸಿದರು.

ಇಷ್ಟರಲ್ಲೇ ಪೋಲಿಸ್ ಇಲಾಖೆಯಿಂದ ಪ್ರತಿಭಟನಾ ನಿರತ ವ್ಯಾಪಾರಸ್ಥರಿಗೆ ಸಮಜಾಯಿಸ ಲಾಯಿತು. ಹೊಟ್ಟೆ ಪಾಡಿಗೆ ವ್ಯಾಪಾರ ಮಾಡುವದಕ್ಕೆ ತಕರಾರಿಲ್ಲ. ವಾರಾಂತ್ಯದ ನಿಷೇಧ ಇರುವ ಕಾರಣ ಜೋಗುಳಬಾವಿ ಸೇರಿದಂತೆ ಎಲ್ಲೆಡೆ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಿಸಲಾಗಿದೆ. ಕಾರಣ ಯಾರೂ ಸಹ ಗುಂಪು ಸೇರದೇ ಕೋವಿಡ್ ನಿಯಮ ಪಾಲಿಸಿ ಮನೆಗೆ ತೆರಳುವಂತೆ ಸೂಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next