Advertisement

ರಸ್ತೆ ಅಭಿವೃದ್ಧಿಗಾಗಿ ರಸ್ತೆತಡೆ

02:47 PM Sep 18, 2017 | |

ಗೊರೇಬಾಳ: ಸಿಂಧನೂರು ತಾಲೂಕಿನ ಮುದ್ದಾಪುರ ಕ್ರಾಸ್‌ನಿಂದ ನಂಜಲದಿನ್ನಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿಗೆ ಗ್ರಹಿಸಿ ಗ್ರಾಮಸ್ಥರು ಶನಿವಾರ ಬೆಳಗ್ಗೆ ರಸ್ತಾ ರೋಕೋ ನಡೆಸಿದರು.

Advertisement

ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 151ಕ್ಕೆ ಹೊಂದಿಕೊಂಡು ಮಸ್ಕಿ-ಸಿಂಧನೂರು ನಗರ ಸಂಪರ್ಕಿಸುವ ಮುದ್ದಾಪುರ ಗ್ರಾಮದಿಂದ ನಂಜಲದಿನ್ನಿ ಗ್ರಾಮದವರೆಗೆ ಕಳೆದ 12 ವರ್ಷಗಳ ಹಿಂದೆ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ರಸ್ತೆ ಸುಧಾರಣೆ ಮಾಡಿದ್ದು ಬಿಟ್ಟರೆ ಇಲ್ಲಿಯವರೆಗು ಯಾವುದೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ ಹೀಗಾಗಿ 14 ಕಿ.ಮೀ. ರಸ್ತೆ ವ್ಯಾಪ್ತಿಯ 8 ಹಳ್ಳಿಗಳ ಗ್ರಾಮಸ್ಥರು ನಿತ್ಯ ಪರದಾಡುವಂತ ಪರಿಸ್ಥಿತಿ ಬಂದೊದಗಿದೆ.

ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಚುನಾಯಿತ ಜನಪ್ರತಿನಿಧಿ ಗಳಿಗೆ ಮನವಿ ಮಾಡಿದರೂ ಯೋಜನವಾಗಿಲ್ಲ. ಇದರಿಂದ ರೋಸಿ ಹೋದ 8 ಗ್ರಾಮಗಳ ಗ್ರಾಮಸ್ಥರು, ವಿದ್ಯಾರ್ಥಿಗಳು ರಸ್ತೆತಡೆ ನಡೆಸಿದರು.

ಮುದ್ದಾಪುರ ಗ್ರಾಮದಿಂದ ನಂಜಲದಿನ್ನಿ ಗ್ರಾಮದವರೆಗೆ  ರುವ 8 ಗ್ರಾಮಗಳ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದ್ದು, ಕೂಡಲೇ ರಸ್ತೆ ಅಭಿವೃದ್ಧಿಪಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮತ್ತೆ ಉಗ್ರ ಹೋರಾಟ ನಡೆಸೇಕಾಗುತ್ತದೆ ಎಚ್ಚರಿಸಿ ಗ್ರಾಮಸ್ಥರು ಪ್ರಭಾರಿ ತಹಶೀಲ್ದಾರ ಶಂಶಾಲಂ ಅವರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ವೆಂಕಟರಾವ್‌ ನಾಡಗೌಡ, ಅಮರೇಶ ಹಂಚಿನಾಳ, ಸುಮಾ, ಜ್ಯೋತಿ, ಲತಾ, ಈರಪ್ಪ, ರುದ್ರಮ್ಮ, ಸುರೇಶ, ಮಲ್ಲಯ್ಯ ಸೇರಿದಂತೆ ನೂರಾರು ಜನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next